ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್‌ಗೆ ಶಾಸಕರ ಮತದಾನ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ: ಸಂಜಯ್‌ ರಾವುತ್‌

Published 20 ಜೂನ್ 2024, 14:16 IST
Last Updated 20 ಜೂನ್ 2024, 14:16 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಶಾಸಕರ ಅನರ್ಹತೆಯ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಅವರು ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಿರ್ಬಂಧಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ’ ಎಂದು ಶಿವಸೇನೆ ನಾಯಕ (ಉದ್ಧವ್ ಠಾಕ್ರೆ ಬಣ) ಸಂಜಯ್‌ ರಾವುತ್‌ ಹೇಳಿದರು. 

‘ಶಾಸಕರ ಅನರ್ಹತೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಈ ಶಾಸಕರು ಪರಿಷತ್ ಸದಸ್ಯರನ್ನು (ಎಂಎಲ್‌ಸಿ) ಆಯ್ಕೆ ಮಾಡುವುದು ಅಸಾಂವಿಧಾನಕವಾಗಿದೆ. ಅವರಿಗೆ ಮತದಾನದ ಹಕ್ಕು ಇಲ್ಲ. ಈ ಚುನಾವಣೆ ಅಸಂವಿಧಾನಕ ಮತ್ತು ಕಾನೂನುಬಾಹಿರ. ಇದಕ್ಕೆ ತಡೆ ನೀಡಬೇಕು ಎಂದು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು. 

ರಾಜ್ಯದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಜುಲೈ 12ರಂದು ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT