ನವದೆಹಲಿ: 'ಜೂನ್‌ನಲ್ಲಿ ಒಂಭತ್ತರಿಂದ 10 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ಉತ್ಪಾದಿಸಲು ಮತ್ತು ಪೂರೈಸಲು ನಾವು ಶಕ್ತರಾಗಿದ್ದೇವೆ,' ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಿಳಿಸಿದೆ ಎಂದು ಕೇಂದ್ರದ ಅಧಿಕೃತ ಮೂಲಗಳು ಭಾನುವಾರ ಮಾಹಿತಿ ನೀಡಿವೆ.

ಕೋವಿಡ್ ಲಸಿಕೆ ಕೊರತೆಯ ಬಗ್ಗೆ ರಾಜ್ಯಗಳು ದೂರಿರುವ ನಡುವೆಯೇ ಎಸ್‌ಐಐ ಕೇಂದ್ರಕ್ಕೆ ಈ ಭರವಸೆ ನೀಡಿದೆ.

'ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ವಿವಿಧ ಸವಾಲುಗಳ ನಡುವೆಯೂ ನಮ್ಮ ನೌಕರರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ,' ಎಂದು ಎಸ್‌ಐಐ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಹೇಳಿದೆ.

'ಮೇನಲ್ಲಿ ನಾವು 6.5 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ಉತ್ಪಾದಿಸಿದ್ದೆವು. ಆದರೆ, ಜೂನ್‌ನಲ್ಲಿ ನಾವು 10 ಕೋಟಿ ಲಸಿಕೆಗಳನ್ನು ಉತ್ಪಾದಿಸಲಿದ್ದೇವೆ ಎಂಬುದನ್ನು ತಿಳಿಸಲು ಸಂತೋಷವಾಗಿದೆ,' ಎಂದು ಎಸ್‌ಐಐನ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜೂನ್‌ನಲ್ಲಿ 6.5 ಕೋಟಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುವುದಾಗಿ ಎಸ್‌ಐಐ ಮೇ ಆರಂಭದಲ್ಲಿ ಹೇಳಿತ್ತು. ಜುಲೈನಲ್ಲಿ ಏಳು ಕೋಟಿ ಮತ್ತು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ 10 ಕೋಟಿ ಡೋಸ್‌ಗಳನ್ನು ತಯಾರಿಸುವುದಾಗಿಯೂ ಎಸ್‌ಐಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.