ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ವಿರೋಧಪಕ್ಷದ ನಾಯಕರಾಗ್ತಾರಾ ರಾಹುಲ್ ಗಾಂಧಿ?

Published 9 ಜೂನ್ 2024, 1:02 IST
Last Updated 9 ಜೂನ್ 2024, 1:02 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ರಾಹುಲ್‌ ಗಾಂಧಿ ಅವರು ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಶನಿವಾರ ನಿರ್ಣಯ ಅಂಗೀಕರಿಸಿದೆ. 

2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 44 ಹಾಗೂ 2019ರಲ್ಲಿ 52 ಸ್ಥಾನಗಳನ್ನು ಗೆದ್ದಿತ್ತು. ಇದರಿಂದಾಗಿ, ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಕ್ಕಿರಲಿಲ್ಲ. ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಕಾರಣಕ್ಕೆ ಲೋಕಸಭೆಯಲ್ಲಿ ಪಕ್ಷದ ನಾಯಕನಾಗಲು ರಾಹುಲ್‌ ಒಪ್ಪಿರಲಿಲ್ಲ. ಈ ಸಲ ಪಕ್ಷವು 99 ಸ್ಥಾನಗಳಲ್ಲಿ ಜಯ ಗಳಿಸಿದೆ.

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು

 • ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಪ್ರಶಂಸನೀಯ

 • ಬಿಜೆಪಿಗೆ ಬಹುಮತ ಸಿಗದೆ ಇರುವುದು ಪ್ರಧಾನಿಯ ವೈಯಕ್ತಿಕ ಹಾಗೂ ನೈತಿಕ ಸೋಲು

 • ಪ್ರಜಾಪ್ರಭುತ್ವ ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿಸುವುದರ ವಿರುದ್ಧ ಜನರು ಫಲಿತಾಂಶ ನೀಡಿದ್ದಾರೆ

 • ಸೋತ ಅಭ್ಯರ್ಥಿಗಳ ಕೆಚ್ಚೆದೆ ಹೋರಾಟ ಶ್ಲಾಘನಾರ್ಹ 

 • ಭಾರತ್‌ ಜೋಡೋ ಯಾತ್ರೆ ಸಾಗಿದ ಪ್ರದೇಶಗಳಲ್ಲಿ ಪಕ್ಷದ ಸ್ಥಾನ ಹಾಗೂ ಮತ ಪ್ರಮಾಣ ಹೆಚ್ಚಳ

 • ಮಣಿ‍ಪುರ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ ಹಾಗೂ ಮಹಾರಾಷ್ಟ್ರದಲ್ಲಿನ ಸಾಧನೆಯೂ ಗಮನಾರ್ಹ 

 • ನಗರ ಪ್ರದೇಶದಲ್ಲಿ ಪಕ್ಷದ ಅಸ್ತಿತ್ವ ದುರ್ಬಲವಾಗಿರುವುದು ಕಳವಳಕಾರಿ 

 • ‘ಇಂಡಿಯಾ’ ಮೈತ್ರಿಕೂಟ ಮುಂದುವರಿಸಲು ಸಂಕಲ್ಪ ಮಾಡೋಣ. ಸಂಸತ್ತಿನ ಒಳಗೆ ಹಾಗೂ ಹೊರಗೆ ಒಗ್ಗಟ್ಟಾಗಿ ಹಾಗೂ ಸಾಮೂಹಿಕವಾಗಿ ಕಾರ್ಯನಿರ್ವಹಿಸೋಣ *ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಪ್ರಶಂಸನೀಯ

 • ಬಿಜೆಪಿಗೆ ಬಹುಮತ ಸಿಗದೆ ಇರುವುದು ಪ್ರಧಾನಿಯ ವೈಯಕ್ತಿಕ ಹಾಗೂ ನೈತಿಕ ಸೋಲು

 • ಪ್ರಜಾಪ್ರಭುತ್ವ ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿಸುವುದರ ವಿರುದ್ಧ ಜನರು ಫಲಿತಾಂಶ ನೀಡಿದ್ದಾರೆ

 • ಸೋತ ಅಭ್ಯರ್ಥಿಗಳ ಕೆಚ್ಚೆದೆ ಹೋರಾಟ ಶ್ಲಾಘನಾರ್ಹ 

 • ಭಾರತ್‌ ಜೋಡೋ ಯಾತ್ರೆ ಸಾಗಿದ ಪ್ರದೇಶಗಳಲ್ಲಿ ಪಕ್ಷದ ಸ್ಥಾನ ಹಾಗೂ ಮತ ಪ್ರಮಾಣ ಹೆಚ್ಚಳ

 • ಮಣಿ‍ಪುರ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ ಹಾಗೂ ಮಹಾರಾಷ್ಟ್ರದಲ್ಲಿನ ಸಾಧನೆಯೂ ಗಮನಾರ್ಹ 

 • ನಗರ ಪ್ರದೇಶದಲ್ಲಿ ಪಕ್ಷದ ಅಸ್ತಿತ್ವ ದುರ್ಬಲವಾಗಿರುವುದು ಕಳವಳಕಾರಿ 

 • ‘ಇಂಡಿಯಾ’ ಮೈತ್ರಿಕೂಟ ಮುಂದುವರಿಸಲು ಸಂಕಲ್ಪ ಮಾಡೋಣ. ಸಂಸತ್ತಿನ ಒಳಗೆ ಹಾಗೂ ಹೊರಗೆ ಒಗ್ಗಟ್ಟಾಗಿ ಹಾಗೂ ಸಾಮೂಹಿಕವಾಗಿ ಕಾರ್ಯನಿರ್ವಹಿಸೋಣ 

ಸಂಸದೀಯ ಪಕ್ಷಕ್ಕೆ ಸೋನಿಯಾ ಅಧ್ಯಕ್ಷೆ

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. 

ಸಂಸತ್‌ನಲ್ಲಿ ಶನಿವಾರ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾವವನ್ನು ಗೌರವ್ ಗೊಗೊಯ್, ಕೆ. ಸುಧಾಕರನ್ ಮತ್ತು ತಾರಿಕ್ ಅನ್ವರ್ ಅನುಮೋದಿಸಿದರು. 

77 ವರ್ಷದ ಸೋನಿಯಾ ಅವರು ಫೆಬ್ರುವರಿಯಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ‘ಕೈ’ ಹಿನ್ನಡೆ: ಖರ್ಗೆ ಗರಂ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಆಡಳಿತವಿರುವ ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ನಿರೀಕ್ಷಿತ ಸ್ಥಾನಗಳನ್ನು ಗಳಿಸದೆ ಇರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಪರಾಮರ್ಶೆ ಸಂಬಂಧ ಶನಿವಾರ ಇಲ್ಲಿ ನಡೆದ ಪಕ್ಷದ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಪಕ್ಷದ ಸಾಧನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.  

ಕರ್ನಾಟಕದಲ್ಲಿ ಪಕ್ಷವು ಕನಿಷ್ಠ 15ರಿಂದ 16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, 9 ಸ್ಥಾನಗಳನ್ನಷ್ಟೇ ಗೆದ್ದಿದೆ. ತೆಲಂಗಾಣದಲ್ಲಿ ಎಂಟು ಕ್ಷೇತ್ರಗಳಲ್ಲಿ ಗೆದ್ದಿದೆ. ‘ಹಿಮಾಚಲ ಪ್ರದೇಶದಲ್ಲಿ ಒಂದು ಕ್ಷೇತ್ರದಲ್ಲೂ ಜಯ ಗಳಿಸಲು ಸಾಧ್ಯವಾಗಿಲ್ಲ. ಪಕ್ಷವು ಪುನರುಜ್ಜೀವನದ ಹಾದಿಯಲ್ಲಿದೆ. ಆದರೆ, ಕೆಲವು ರಾಜ್ಯಗಳಲ್ಲಿ ನಮ್ಮ ಸಾಮರ್ಥ್ಯ ಹಾಗೂ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT