ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಒಂದೊಂದು ಸುಳ್ಳಿಗೂ ನ್ಯಾಯಾಲಯಕ್ಕೆ ಎಳೆಯುತ್ತೇನೆ:ಎಎಪಿಗೆ ಸ್ವಾತಿ ಮಾಲಿವಾಲ್

Published 21 ಮೇ 2024, 3:17 IST
Last Updated 21 ಮೇ 2024, 3:17 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಆರೋಪಿಸುವ ಮೂಲಕ ಸುಳ್ಳು ಆರೋಪ ಮಾಡುತ್ತಿರುವ ಎಎಪಿ ನಾಯಕರನ್ನು ನ್ಯಾಯಾಲಯಕ್ಕೆ ಎಳೆಯುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತನ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಂಧನಕ್ಕೊಳಗಾಗಿರುವ ಬಿಭವ್ ಕುಮಾರ್ ವಿರುದ್ಧ ದೂರು ಕೊಟ್ಟ ಬಳಿಕ ಎಎಪಿ ಪಕ್ಷದಲ್ಲಿ ನನ್ನ ಸ್ಟೇಟಸ್ ‘ಲೇಡಿ ಸಿಂಗಂ’ನಿಂದ ‘ಬಿಜೆಪಿ ಏಜೆಂಟ್’ ಎಂದು ಬದಲಾಗಿದೆ ಎಂದು ಹೇಳಿದ್ದಾರೆ.

‘ಬಿಭವ್ ಕುಮಾರ್ ವಿರುದ್ಧ ದೂರು ನೀಡುವುದಕ್ಕೂ ಮುನ್ನ ನಾನು ಅವರ ಪ್ರಕಾರ ‘ಲೇಡಿ ಸಿಂಗಂ’, ಈಗ ನಾನು ‘ಬಿಜೆಪಿ ಏಜೆಂಟ್’ ಆದೆನೇ? ನೀವು ಹರಡುವ ಪ್ರತಿಯೊಂದು ಸುಳ್ಳಿಗೂ ನಾನು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ’ ಎಂದು ಮಾಲಿವಾಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ನನ್ನ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ದೆಹಲಿ ಸಚಿವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಇರುವುದರಿಂದ ಬಿಜೆಪಿ ಸೂಚನೆ ಮೇರೆಗೆ ಇವೆಲ್ಲವನ್ನೂ ನಾನು ಮಾಡುತ್ತಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಈ ಎಫ್‌ಐಆರ್ 8 ವರ್ಷಗಳ ಹಿಂದೆ 2016ರಲ್ಲಿ ದಾಖಲಾಗಿತ್ತು, ನಂತರ ಸಿಎಂ ಮತ್ತು ಲೆಫ್ಟಿನೆಂಟ್ ಗವರ್ನರ್ ಇಬ್ಬರೂ ನನ್ನನ್ನು ಎರಡು ಬಾರಿ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಈ ಪ್ರಕರಣ ಸಂಪೂರ್ಣ ನಕಲಿಯಾಗಿದ್ದು, ಯಾವುದೇ ಹಣದ ವಹಿವಾಟು ನಡೆದಿಲ್ಲ ಎಂದಿರುವ ಹೈಕೋರ್ಟ್, ಪ್ರಕರಣಕ್ಕೆ ಒಂದೂವರೆ ವರ್ಷ ತಡೆ ನೀಡಿದೆ ಎಂದು ಹೇಳಿದ್ದಾರೆ.

‘ಸತ್ಯವನ್ನು ನುಡಿದ ಕಾರಣಕ್ಕಾಗಿ ಇಡೀ ಟ್ರೋಲ್ ಆರ್ಮಿಯನ್ನು ನನ್ನ ವಿರುದ್ಧ ನಿಯೋಜಿಸಲಾಗಿದೆ’ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT