ಶ್ರೀನಗರ: ಪ್ರತಿಕೂಲ ಹವಾಮಾನದ ಕಾರಣ ಕಣಿವೆ ಮತ್ತು ಜಮ್ಮು ವಿಭಾಗದ ಚಳಿಗಾಲದ ವಲಯ ಪ್ರದೇಶಗಳಲ್ಲಿನ ಶಾಲೆಗಳಿಗೆ ಚಳಿಗಾಲದ ರಜೆಯನ್ನು ಆರು ದಿನಗಳವರೆಗೆ ವಿಸ್ತರಿಸಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ಆದೇಶಿಸಿದೆ.
.ಜಮ್ಮು | ಗುಂಡಿನ ದಾಳಿ: ಉಗ್ರರಿಗಾಗಿ ಮುಂದುವರಿದ ಶೋಧ.
ಶಾಲಾ ಶಿಕ್ಷಣ ಇಲಾಖೆ ಹಂಚಿಕೊಂಡ ಆದೇಶದ ಪ್ರಕಾರ ಶಾಲೆಗಳು ಮಾರ್ಚ್ 7 ರಂದು ಮತ್ತೆ ತೆರೆಯಲಿವೆ. ಜಮ್ಮು-ಕಾಶ್ಮೀರ ಸಚಿವೆ ಸಕಿನಾ ಇಟೂ ಅವರು ಆದೇಶ ಪ್ರತಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.

ಜಮ್ಮು ವಿಭಾಗದ ಕಣಿವೆ ಮತ್ತು ಚಳಿಗಾಲದ ವಲಯ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಓದುತ್ತಿರುವ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಡಿಸೆಂಬರ್ 10 ರಿಂದ ಫೆಬ್ರವರಿ 28 ರವರೆಗೆ ರಜೆ ಸಾರಲಾಗಿತ್ತು.

5 ರಿಂದ 12 ನೇ ತರಗತಿಗಳಿಗೆ, ಡಿಸೆಂಬರ್ 16 ರಿಂದ ಫೆಬ್ರವರಿ 28 ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿತ್ತು.
.ಜಮ್ಮು: ಸೇನಾ ವಾಹನದ ಮೇಲೆ ದಾಳಿ; ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮುಂದುವರಿಕೆ .
ಮಾರ್ಚ್ 1 ರಂದು ಶಾಲೆ ಪುನಾರಂಭಿಸಲು ನಿರ್ಧರಿಸಲಾಗಿತ್ತು.

ಆದಾಗ್ಯೂ, ಪ್ರತಿಕೂಲ ಹವಾಮಾನ ಮತ್ತು ಮಾರ್ಚ್ 3 ರವರೆಗೆ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಸರ್ಕಾರ ಶುಕ್ರವಾರ ಮಾರ್ಚ್ 6 ರವರೆಗೆ ರಜೆಯನ್ನು ವಿಸ್ತರಿಸಿದೆ.

ಶುಕ್ರವಾರ ಕಾಶ್ಮೀರದಲ್ಲಿ ರಾತ್ರಿಯಿಡೀ ಹಿಮಪಾತವಾಗಿದ್ದರಿಂದ ರೈಲು, ವಿಮಾನ ಮತ್ತು ರಸ್ತೆ ಸಾರಿಗೆ ಮೇಲೆ ಪರಿಣಾಮ ಬೀರಿದೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ, ಮಣ್ಣು ಕುಸಿತ ಸಂಭವಿಸಿವೆ.
.ಜಮ್ಮು & ಕಾಶ್ಮೀರ: ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.