ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಸತ್ ಭವನದ ಸಿಬ್ಬಂದಿಗೆ ಹೊಸ ಸಮವಸ್ತ್ರ: ಖಾಕಿ, ಕಮಲದ ಹೂವಿಗೆ ಆದ್ಯತೆ

Published 12 ಸೆಪ್ಟೆಂಬರ್ 2023, 14:46 IST
Last Updated 12 ಸೆಪ್ಟೆಂಬರ್ 2023, 14:46 IST
ಅಕ್ಷರ ಗಾತ್ರ

ನವದೆಹಲಿ: ಇದೇ ಸೆಪ್ಟೆಂಬರ್ 18 ರಿಂದ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಈ ವೇಳೆ ಸೆ.19 ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನದ ಪೂಜೆಯ ನಂತರ ಅಲ್ಲಿಯೇ ಸಂಸತ್ ಸಿಬ್ಬಂದಿಯ ಕೆಲಸ ಪ್ರಾರಂಭವಾಗಲಿದ್ದು ಅವರು ಹೊಸ ಸಮವಸ್ತ್ರ ಧರಿಸಲಿದ್ದಾರೆ.

ಹೊಸ ಸಂಸತ್ ಭವನದ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದ್ದು, ಖಾಕಿ ಬಣ್ಣಕ್ಕೆ ಹಾಗೂ ಕಮಲದ ಹೂವಿಗೆ ಅದರಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.

ಈ ಹೊಸ ಸಮವಸ್ತ್ರಗಳನ್ನು National Institute of Fashion Technology (NIFT) ವಿನ್ಯಾಸಗೊಳಿಸಿದೆ.

ಸಚಿವಾಲಯದ ಸಿಬ್ಬಂದಿ, ಅಧಿಕಾರಿಗಳಿಗೂ ಪ್ರತ್ಯೇಕ ಹೊಸ ಸಮವಸ್ತ್ರಗಳನ್ನು ಜಾರಿಗೊಳಿಸಲಾಗಿದೆ. ಇದರಲ್ಲೂ ಕೂಡ ಕಮಲದ ಚಿತ್ರಗಳೊಂದಿಗೆ ನೆಹರು ಶರ್ಟ್, ಖಾಕಿ ಬಣ್ಣದ ಪ್ಯಾಂಟ್ ಸೂಚಿಸಲಾಗಿದೆ.

ಮಾರ್ಷಲ್ ಹಾಗೂ ಸೆಕ್ಯೂರಿಟಿ ಸಿಬ್ಬಂದಿ ಸಮವಸ್ತ್ರಗಳೂ ಬದಲಾಗಿವೆ ಎಂದು ಸುದ್ದಿಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT