ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನವನ್ನು ಫೋಟೊಶೂಟ್ ಮೂಲಕ ಸಂಭ್ರಮಿಸಿದ ಮಹಿಳೆ

Published 2 ಮೇ 2023, 16:25 IST
Last Updated 3 ಮೇ 2023, 8:14 IST
ಅಕ್ಷರ ಗಾತ್ರ

ನವದೆಹಲಿ: ವಿಚ್ಛೇದನ ಎಂಬುದು ಭಾರತೀಯ ಸಮಾಜದಲ್ಲಿ ಅಷ್ಟಾಗಿ ಒಪ್ಪಿಕೊಳ್ಳದ ವಿಷಯವಾಗಿದೆ. ವಿಚ್ಚೇದನ ಪಡೆಯುವ ದಂಪತಿ ಕುರಿತು ಮೂಗು ಮುರಿಯುವವರೇ ಹೆಚ್ಚು. ಆದರೆ, ಇಲ್ಲೊಬ್ಬ ಮಹಿಳೆ ಅದಕ್ಕೆಲ್ಲ ಸೆಡ್ಡು ಹೊಡೆದಿದ್ದು, ಗಂಡನಿಂದ ವಿಚ್ಛೇದನ ಪಡೆದ ಕೂಡಲೆ ಫೋಟೊಶೂಟ್ ನಡೆಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಕಲಾವಿದೆ ಮತ್ತು ಫ್ಯಾಶನ್ ಡಿಸೈನರ್ ಆಗಿರುವ ಶಾಲಿನಿ ಎಂಬವರು ತಮ್ಮ ವಿಚ್ಛೇದನವನ್ನು ಫೋಟೊಶೂಟ್ ಮೂಲಕ ಸಂಭ್ರಮಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕೆಂಪು ಉಡುಪನ್ನು ಧರಿಸಿರುವ ಅವರು, ಕೈಯಲ್ಲಿ ವಿಚ್ಛೇದನ ಪತ್ರ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

‘ದನಿಯಿಲ್ಲದವರೆಂದು ಭಾವಿಸುವವರಿಗೆ ವಿಚ್ಛೇದಿತ ಮಹಿಳೆಯ ಸಂದೇಶ. ಕೆಟ್ಟ ದಾಂಪತ್ಯವನ್ನು ತೊರೆಯುವುದು ಸರಿ. ಏಕೆಂದರೆ, ನೀವು ಸಂತೋಷವಾಗಿರಲು ಅರ್ಹರಾಗಿದ್ದೀರಿ ಮತ್ತು ಎಂದಿಗೂ ನಿಮ್ಮನ್ನು ಕುಗ್ಗಿಸಿಕೊಳ್ಳಬೇಡಿ. ನಿಮ್ಮ ಜೀವನದ ಮೇಲೆ ಹಿಡಿತ ಸಾಧಿಸಿ. ನಿಮ್ಮ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿ. ವಿಚ್ಛೇದನವು ವೈಫಲ್ಯವಲ್ಲ! ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಒಂದು ಮಹತ್ವದ ತಿರುವು. ಮದುವೆಯನ್ನು ಕಡಿದುಕೊಂಡು ಏಕಾಂಗಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು, ಹಾಗಾಗಿ, ನನ್ನ ಎಲ್ಲಾ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಅರ್ಪಿಸುತ್ತೇನೆ’ಎಂದು ಅಡಿಬರಹ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT