ನವದೆಹಲಿ\: ಮೆಟ್ರೊ ನಿಲ್ದಾಣದಲ್ಲಿ ಅನಿತಾ ಎಂಬ 45 ವರ್ಷದ ಮಹಿಳೆ ಜಿಗಿದು ಮೃತಪಟ್ಟಿರುವ ಘಟನೆ ಪಶ್ಚಿಮ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯು ಮಾನಸಿಕ ಅಸ್ವಸ್ಥರಾಗಿದ್ದರು ಎಂದು ಆಕೆಯ ಪತಿ ಪೊಲೀಸ್ ತನಿಖೆಯ ವೇಳೆ ತಿಳಿಸಿದ್ದಾರೆ.

ಮೃತ ಮಹಿಳೆಯು ಉತ್ತಮ್ ನಗರ ಪಶ್ಚಿಮ ಮೆಟ್ರೊ ನಿಲ್ದಾಣದಲ್ಲಿ ಮೆಟ್ಟಿಲುಗಳಿಂದ ಮೇಲಕ್ಕೆ ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೆಟ್ರೊ ಸಿಬ್ಬಂದಿ ಹಾಗೂ ಪ್ರಯಾಣಿಕರು ಇರದ ಸ್ಥಳವನ್ನು ಖಚಿತಪಡಿಸಿಕೊಂಡು, ತನ್ನ ಮೊಬೈಲ್ ದೂರದಲ್ಲಿರಿಸಿ ಮೆಟ್ರೊ ನಿಲ್ದಾಣದ ಮೇಲ್ಭಾಗದಿಂದ ಅನಿತಾ ಹಾರಿದ್ದಾರೆ‘ ಎಂದರು.

ಅನಿತಾ ಅವರನ್ನು ದೀನದಯಾಳ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯ ವೈದ್ಯರು ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

ಪತಿ ಸತೀಶ್, ಮಗಳು ಹಾಗೂ ಮಗನ ಜೊತೆ ಅನಿತಾ ವಾಸವಾಗಿದ್ದರು. ಇವರು ಕೆಲ ವರ್ಷಗಳಿಂದ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪತಿ ಹೇಳಿಕೊಂಡಿದ್ದಾರೆ. ಈ ಪ್ರಕರಣ ಕುರಿತ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.