ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ನಂತರ ದೇವಾಲಯದಲ್ಲಿ ಸಜೀವ ದಹನ!

Last Updated 15 ಜುಲೈ 2018, 8:00 IST
ಅಕ್ಷರ ಗಾತ್ರ

ಬರೇಲಿ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ 35ರ ಹರೆಯದ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ನಂತರ ದೇವಸ್ಥಾನವೊಂದರಲ್ಲಿ ಸಜೀವ ದಹನ ಮಾಡಿದ ಘಟನೆ ಶನಿವಾರ ನಡೆದಿದೆ.
5 ಮಂದಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದರು. ಮೃತ ಮಹಿಳೆಯ ಪತಿಯ ದೂರಿನ ಪ್ರಕಾರ, ಅತ್ಯಾಚಾರಕ್ಕೊಳಗಾದ ಮಹಿಳೆ ಸಾಯುವ ಮುನ್ನ ಉತ್ತರ ಪ್ರದೇಶ ಪೊಲೀಸರಿಗೆ ಕರೆ ಮಾಡಿದ್ದರೂ ಅಲ್ಲಿಂದ ಯಾವುದೇ ಉತ್ತರ ಸಿಗಲಿಲ್ಲ ಎಂದಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಈಕೆಯ ಪತಿ ಗಾಜಿಯಾಬಾದ್‍ನಲ್ಲಿ ಕೆಲಸದಲ್ಲಿದ್ದಾರೆ.

ಏನಿದು ಪ್ರಕರಣ?
ಪೊಲೀಸರ ಪ್ರಕಾರ ಮಹಿಳೆ ನಿದ್ರಿಸುತ್ತಿದ್ದಾಗ ಕಾಮುಕರು ಆಕೆಯ ಮೇಲೆ ದಾಳಿ ಮಾಡಿದ್ದಾರೆ.ಶನಿವಾರ ತಡರಾತ್ರಿ 2.30ಕ್ಕೆ ಈ ಘಟನೆ ನಡೆದಿದೆ.5 ಮಂದಿ ಈಕೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿ ನಂತರ ದೇವಸ್ಥಾನದ ಯಾಗಶಾಲೆಯಲ್ಲಿ ಸಜೀವ ದಹನ ಮಾಡಿದ್ದಾರೆ.ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.ಅತ್ಯಾಚಾರದ ನಂತರ ಪೊಲೀಸರಿಗೆ ಫೋನ್ ಮಾಡುವ ಪ್ರಯತ್ನ ಮಾಡಿದರೂ ಅಲ್ಲಿಂದ ಕರೆ ಸ್ವೀಕರಿಸಿಲ್ಲ ಎಂದು ಆಕೆ ತನ್ನ ಸಂಬಂಧಿಯೊಂದಿಗೆ ಫೋನ್‍ ಕರೆ ಮಾಡಿದ್ದು, ಆ ಸಂಭಾಷಣೆಯ ಆಡಿಯೋ ತಮಗೆ ಲಭ್ಯವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಸಂತ್ರಸ್ತೆಯ ಪತಿ ಹೇಳಿದ್ದೇನು?
ಶನಿವಾರ ರಾತ್ರಿ ನನ್ನ ಪತ್ನಿ ಮನೆಯಲ್ಲಿ ಒಬ್ಬಳೇ ಇದ್ದಾಗ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿದ್ದಾರೆ.ಆ ಹೊತ್ತು ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದ್ದು, ಚಿಮಿಣಿ ದೀಪ ಮಾತ್ರ ಮನೆಯಲ್ಲಿ ಉರಿಯುತ್ತಿತ್ತು.ಅತ್ಯಾಚಾರ ನಡೆದ ನಂತರ ಆಕೆ ನನಗೆ ಮತ್ತು ಆಕೆಯ ಅಣ್ಣನಿಗೆ ಕರೆ ಮಾಡಲು ಯತ್ನಿಸಿದರೂ ನೆಟ್ವರ್ಕ್ ಸಿಗಲಿಲ್ಲ. ಆನಂತರ ಆಕೆ ತನ್ನ ಸಂಬಂಧಿಯೊಬ್ಬರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆಕೆಯ ಸಂಬಂಧಿ ಪೊಲೀಸರಿಗೆಕರೆ ಮಾಡುವ ಮುನ್ನ ಆ ಕಾಮುಕರು ಮತ್ತೆ ಮನೆಗೆ ಬಂದು ಆಕೆಯನ್ನು ಹತ್ತಿರದ ದೇವಸ್ಥಾನಕ್ಕೆ ಎಳೆದೊಯ್ದಿದ್ದಾರೆ. ಅಲ್ಲಿನ ಯಾಗಶಾಲೆಯಲ್ಲಿ ಆಕೆಯನ್ನು ಸಜೀವ ದಹನ ಮಾಡಿದ್ದಾರೆ.

ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದು, ಐಪಿಸಿ ಸೆಕ್ಷನ್ 376ಡಿ (ಸಾಮೂಹಿಕ ಅತ್ಯಾಚಾರ), 301 (ಹತ್ಯೆ),201 (ಸಾಕ್ಷ್ಯ ನಾಶ) , 147 (ದಂಗೆ) , 148 (ಶಸ್ತ್ರಾಸ್ತ್ರ ಬಳಸಿ ದಂಗೆ) , 149 ( ಕಾನೂನುಬಾಹಿರ ಕೃತ್ಯ) ಅಡಿಯಲ್ಲಿ ಕೇಸು ದಾಖಲಾಗಿದೆ.
ಆರೋಪಿಗಳನ್ನು ಆರಾಮ್ ಸಿಂಗ್, ಮಹಾವೀರ್, ಚರಣ್ ಸಿಂಗ್, ಗುಲ್ಲು ಮತ್ತು ಕುಮಾರ್ ಪಾಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅದೇ ಗ್ರಾಮದವರಾಗಿದ್ದು, ಕೆಲವು ತಿಂಗಳಿನಿಂದ ಮಹಿಳೆಗೆ ಕಿರುಕುಳ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT