ಸೋಮವಾರ, 9 ಮಾರ್ಚ್ 2026
×
ADVERTISEMENT

AI ಶೃಂಗದಲ್ಲಿ ಪ್ರತಿಭಟನೆ: ಯುವ ಕಾಂಗ್ರೆಸ್‌ ಅಧ್ಯಕ್ಷ ಉದಯ್ ಭಾನು ಬಂಧನ

Published : 24 ಫೆಬ್ರುವರಿ 2026, 5:41 IST
Last Updated : 24 ಫೆಬ್ರುವರಿ 2026, 5:41 IST
ADVERTISEMENT
ಫಾಲೋ ಮಾಡಿ
Comments
ಶಾಂತಿಯುತವಾಗಿ ಪ್ರತಿಭಟಿಸುವುದು ಪ್ರಜಾಸತ್ತಾತ್ಮಕ ಮೂಲಭೂತ ಹಕ್ಕು. ನನ್ನ ಮಗನನ್ನು ಬಂಧಿಸಿರುವುದು ಸರ್ಕಾರದ ಸರ್ವಾಧಿಕಾರಿತನವನ್ನು ಬಿಂಬಿಸಿದೆ
ರಜನಿ ಬಾಲಾ ಉದಯ್‌ ಭಾನು ಚಿಬ್‌ ತಾಯಿ
ಎ.ಐ. ಶೃಂಗಸಭೆಯ ಅರಾಜಕ ಘಟನೆಯ ಹಿಂದೆ ರಾಹುಲ್‌ ಗಾಂಧಿ ಅವರೇ ‘ಸೂಪರ್‌ ಮಾಸ್ಟರ್‌ ಮೈಂಡ್‌’. ಅವರ ಆದೇಶದ ಮೇಲೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯು ದೇಶದ ಮಾನ ಕೆಡಿಸಿತು
ಗೌರವ್‌ ಭಾಟಿಯಾ ಬಿಜೆಪಿ ರಾಷ್ಟ್ರೀಯ ವಕ್ತಾರ
ನರೇಂದ್ರ ಮೋದಿ ಒಬ್ಬರು ಹೇಡಿ. ತನ್ನ ನೀತಿಗಳನ್ನು ಸಮರ್ಥಿಸಿಕೊಳ್ಳಲು ಭಯಪಡುವ ಅವರು ಸಂಸತ್‌ಗೆ ಹಾಜರಾಗುತ್ತಿಲ್ಲ. ಹೀಗಾಗಿ ನಮಗೆ ಹಾಗೂ ಯುವಕರಿಗೆ ಹೆದರುತ್ತಿದ್ದಾರೆ. ಬಂಧನವನ್ನು ಖಂಡಿಸುತ್ತೇನೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಶಾಂತಿಯುತ ಪ್ರತಿಭಟನೆ
‘ನಾವು ದೇಶದ ಧ್ವನಿ. ಸರ್ವಾಧಿಕಾರಿಗಳಿಗೆ ಹೆದರುವುದಿಲ್ಲ. ಸಂವಿಧಾನಕ್ಕಾಗಿ ನಾವು ಹೋರಾಟ ನಡೆಸುತ್ತೇವೆ. ನಾವು ದೇಶಕ್ಕಾಗಿ ಬದುಕುತ್ತೇವೆ’.... ಯುವ ಕಾಂಗ್ರೆಸ್‌ ಅಧ್ಯಕ್ಷ ಉದಯ್‌ ಭಾನು ಚಿಬ್‌ ಬಂಧನದ ಬಳಿಕ ಪಕ್ಷದ ಕಾರ್ಯಕರ್ತರು ಈ ರೀತಿಯಾಗಿ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು. ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ದೇಶದಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಂಧನವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಖಂಡಿಸಿದ್ದು ಪ್ರತಿಭಟನೆ ನಡೆಸಿದವರು ‘ಬಬ್ಬರ್‌ಶೇರ್‌ ಕಾಮ್ರೇಡ್ಸ್’ ಎಂದು ಹೊಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT