ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಯರ್ ಖರೀದಿಸಿದ ಮುಸ್ಲಿಂ ಮಹಿಳೆಯ ತಲೆ ಕತ್ತರಿಸುವುದಾಗಿ ಜೀವ ಬೆದರಿಕೆ

Published 13 ಜೂನ್ 2023, 15:55 IST
Last Updated 13 ಜೂನ್ 2023, 15:55 IST
ಅಕ್ಷರ ಗಾತ್ರ

ಲಖನೌ: ಮದ್ಯದಂಗಡಿಗೆ ತೆರಳಿ ಬಿಯರ್ ಖರೀದಿಸಿದರು ಎಂಬ ಕಾರಣಕ್ಕೆ ಇಬ್ಬರು ಮುಸ್ಲಿಂ ಮಹಿಳೆಯರಿಗೆ ‘ಶಿರಚ್ಛೇದ ಮಾಡುತ್ತೇವೆ’ ಎಂದು ಅದೇ ಸಮುದಾಯದ ಮೂವರು ಯುವಕರು ಜೀವಬೆದರಿಕೆ ಒಡ್ಡಿರುವ ಘಟನೆ ಇಲ್ಲಿ ನಡೆದಿದೆ.

ಮಾರುಕಟ್ಟೆ ಪ್ರದೇಶದ ಮದ್ಯದಂಗಡಿಗೆ ತೆರಳಿದ್ದ ಮುಸ್ಲಿಂ ಮಹಿಳೆಯರು ಎರಡು ಬಿಯರ್‌ ಖರೀದಿಸಿದ್ದಾರೆ. ಅವರಿಗೆ ಎದುರಾದ ಮುಸ್ಲಿಂ ಯುವಕರು ‘ತಲೆ ತೆಗೆಯುವುದಾಗಿ’ ಬೆದರಿಕೆ ಒಡ್ಡಿದ್ದಾರೆ. ಈ ವಿಡಿಯೊ ಮಂಗಳವಾರ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದೆ.

‘ಇಸ್ಲಾಂ ಪ್ರಕಾರ ಮಹಿಳೆಯರು ಮದ್ಯಪಾನ ಮಾಡುವುದು ಪಾಪ. ನಾನು ಈಗಾಗಲೇ ಜೈಲಿಗೆ ಹೋಗಿದ್ದೇನೆ. ತಲೆ ತೆಗೆಯಲೂ ಚಿಂತಿಸುವುದಿಲ್ಲ‘ ಎಂದು ಒಬ್ಬ ಯುವಕ ಬೆದರಿಕೆ ಒಡ್ಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಯುವತಿಯರು ಬೇಗ ಸ್ಥಳದಿಂದ ನಿರ್ಗಮಿಸಲು ಯತ್ನಿಸುತ್ತಿರುವುದು ದಾಖಲಾಗಿದೆ. ಒಬ್ಬರು ‘ನಾವು ಇನ್ನು ಮದ್ಯಪಾನ ಮಾಡುವುದಿಲ್ಲ. ನಮ್ಮಿಂದ ತಪ್ಪಾಗಿದೆ’ ಎಂದು ಬೆದರಿಕೆ ಒಡ್ಡಿದ್ದ ಯುವಕರಿಗೆ ಹೇಳಿರುವುದು ದಾಖಲಾಗಿದೆ.

ವಿಡಿಯೊ ಹಂಚಿಕೆಯಾಗುತ್ತಿದ್ದಂತೆಯೇ ಪೊಲೀಸರು ಮೂವರನ್ನು ಬಂಧಿಸಿದ್ದು, ಅವರನ್ನು ಮುಜಾಫರ್‌ನಗರ ನಿವಾಸಿಗಳಾದ ಶಹನವಾಜ್‌, ಸಾಜಿದ್, ಆದಿಲ್‌ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT