ಬಾಲಸೋರ್ (ಒಡಿಶಾ): ಈಗಾಗಲೇ ಸೇನಾ ಪಡೆಗೆ ಸೇರ್ಪಡೆಯಾಗಿರುವ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸ್ವದೇಶಿ ನಿರ್ಮಿತ ಅಗ್ನಿ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಗುರುವಾರ ಯಶಸ್ವಿಯಾಗಿ ನಡೆಯಿತು.

ನೆಲದಿಂದ ನೆಲಕ್ಕೆ 2000 ಕಿ.ಮೀ. ದೂರದವರೆಗೂ ಚಿಮ್ಮಬಲ್ಲ ಈ ಕ್ಷಿಪಣಿಯ ಪರೀಕ್ಷೆಯು ಒಡಿಶಾ ಕಡಲ ತೀರದ ವ್ಹೀಲರ್ ದ್ವೀಪದಲ್ಲಿ ನಡೆಯಿತು. ಇಲ್ಲಿನ ಸಮಗ್ರ ಪರೀಕ್ಷಾ ವಲಯದ (ಐಟಿಆರ್) 4ನೇ ಉಡಾವಣಾ ಸಂಕೀರ್ಣದಿಂದ ಬೆಳಿಗ್ಗೆ 8.48ಕ್ಕೆ ಚಿಮ್ಮಿದ ಕ್ಷಿಪಣಿ ಯಶಸ್ವಿಯಾಗಿ ಗುರಿ ತಲುಪಿತು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲ ಅಪೇಕ್ಷಿತ ಮಾನದಂಡಗಳಿಗೆ ಅನುಗುಣವಾಗಿ ಕ್ಷಿಪಣಿಯ ಪರೀಕ್ಷೆ ಸಂಪೂರ್ಣ ಯಶಸ್ವಿಯಾಯಿತು ಎಂದು ಐಟಿಆರ್ ನಿರ್ದೇಶಕ ಎಂ.ವಿ.ಕೆ.ವಿ. ಪ್ರಸಾದ್ ಹರ್ಷ ವ್ಯಕ್ತಪಡಿಸಿದ್ದಾರೆ,ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ನೆರವಿನೊಂದಿಗೆ ಸೇನಾಪಡೆಯ ಸ್ಟ್ರಾಟಜಿಕ್ ಫೋರ್ಸ್‌ಸ್ ಕಮಾಂಡ್ (ಎಸ್‌ಎಫ್‌ಸಿ) ಈ ಪರೀಕ್ಷೆ ನಡೆಸಿತು. ಸೇನಾ ಪಡೆಗಳ ತರಬೇತಿಯ ಅಂಗವಾಗಿ ಈ ಪರೀಕ್ಷೆ ಏರ್ಪಡಿಸಲಾಗಿತ್ತು ಎಂದು ಡಿಆರ್‌ಡಿಒ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಗುರಿಯತ್ತ ಚಿಮ್ಮಿದ ಕ್ಷಿಪಣಿಯ ಸಂಪೂರ್ಣ ಪಥವನ್ನು ರೇಡಾರ್, ಟೆಲಿಮೆಟ್ರಿ ವೀಕ್ಷಣಾ ಸ್ಟೇಷನ್‌ಗಳು, ಎಲೆಕ್ಟ್ರೊ- ಆಪ್ಟಿಕ್ ಉಪಕರಣಗಳು ಹಾಗೂ ನೌಕಾಪಡೆಯ ಹಡಗುಗಳ ನೆರವಿನಿಂದ ದಾಖಲಿಸಿಕೊಳ್ಳಲಾಯಿತು.
ಎರಡು ಹಂತಗಳಿಂದ ಕೂಡಿದ ದ್ರವ ರಾಕೆಟ್ ಇಂಧನದಿಂದ ನೂಕು ಬಲ ಪಡೆಯುವ ಈ ಕ್ಷಿಪಣಿಯು 20 ಮೀಟರ್ ಉದ್ದ ಹಾಗೂ 17 ಟನ್ ತೂಕ ಹೊಂದಿದೆ. ಗರಿಷ್ಠ 1000 ಕಿ.ಮೀ. ತೂಕವನ್ನು ಗುರಿಯತ್ತ ಕೊಂಡೊಯ್ಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.