ಧಮರಾ (ಒಡಿಶಾ) (ಪಿಟಿಐ): ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 5,000 ಕಿ.ಮೀ ಕ್ರಮಿಸಬಲ್ಲ ಸ್ವದೇಶಿ ನಿರ್ಮಿತ `ಅಗ್ನಿ -5~ ಕ್ಷಿಪಣಿಯ ಪ್ರಥಮ ಪ್ರಯೋಗಾರ್ಥ ಪರೀಕ್ಷೆಯು ಒಡಿಶಾದ ಕರಾವಳಿ ತೀರದಲ್ಲಿ ಗುರುವಾರ ಯಶಸ್ವಿಯಾಗಿದೆ.

ಮೂರು ಹಂತಗಳನ್ನು ಹೊಂದಿರುವ ಕ್ಷಿಪಣಿಯನ್ನು ವಿಲ್ಹರ್ ದೀಪದ ಸಮೀಪದಲ್ಲಿರುವ ಸಮಗ್ರ ಉಡಾವಣಾ ವಲಯದಲ್ಲಿ (ಐಟಿಆರ್) ಸಂಚಾರಿ ಉಡಾವಣಾ ವಾಹನದ (ಮೊಬೈಲ್ ಲಾಂಚರ್ ವೆಹಿಕಲ್) ಮೂಲಕ ಬೆಳಿಗ್ಗೆ 8 ಗಂಟೆ ಸುಮಾರಿಗೆ ಉಡಾಯಿಸಲಾಯಿತು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

`ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಯಶಸ್ವಿಯಾಗಿದ್ದು, ಕ್ಷಿಪಣಿಯು ಸಮುದ್ರದಲ್ಲಿದ್ದ ನಿಗದಿತ ಗುರಿಯನ್ನು ತಲುಪಿದೆ~ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ (ಡಿಆರ್ಡಿಓ) ಮುಖ್ಯಸ್ಥ ವಿ.ಕೆ.ಸಾರಸ್ವತ್ ಹೇಳಿದರು.

ಪ್ರಧಾನಿ ಸಿಂಗ್, ಆಂಟನಿ ಶ್ಲಾಘನೆ: `ಅಗ್ನಿ -5~ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಭಾರತದ ಕ್ಷಿಪಣಿ ಯೋಜನೆಯಲ್ಲಿ ಒಂದು ಹೊಸ ಮೈಲುಗಲ್ಲು ಎಂದು ಬಣ್ಣಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಯಶಸ್ವಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.