ನವದೆಹಲಿ (ಪಿಟಿಐ): ಆಕಾಶ ವೀಕ್ಷಕರು ಬುಧವಾರ ರಾತ್ರಿ ಒಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದಾರೆ. ಭೂಮಿಯಿಂದ ಅತಿ ದೂರ ಸಾಗುವ ಕಾರಣ ಬಾನಂಗಳದಲ್ಲಿ ಚಿಕ್ಕದಾದ ಹಾಗೂ ಅಷ್ಟೇನೂ ಪ್ರಕಾಶಮಾನವಲ್ಲದ ಹುಣ್ಣಿಮೆ ಚಂದ್ರನ ದರ್ಶನವಾಗಲಿದೆ.

`ಇಂದಿನ ಹುಣ್ಣಿಮೆ ಚಂದ್ರ ಸುಮಾರು ಶೇ 12.5ರಷ್ಟು ಚಿಕ್ಕದಾಗಿರಲಿದ್ದು, `ಅತಿ ದೊಡ್ಡ ಹುಣ್ಣಿಮೆ ಚಂದ್ರ~ನಿಗೆ (ಸೂಪರ್ ಮೂನ್) ಹೋಲಿಸಿದರೆ ಪ್ರಕಾಶ ಶೇ 20 ರಷ್ಟು ಕಡಿಮೆ ಇರುತ್ತದೆ~ ಎಂದು ವಿಜ್ಞಾನ ಜಾಗೃತಿ ಸಂಘದ (ಎಸ್‌ಪಿಎಸಿಇ) ನಿರ್ದೇಶಕ ಸಿ.ವಿ.ದೇವಗನ್ ತಿಳಿಸಿದ್ದಾರೆ.

ಚಂದ್ರನು ಭೂಮಿಯಿಂದ 4,06,434 ಕಿ.ಮೀ ದೂರದಲ್ಲಿ ಇರುತ್ತಿದ್ದು, ಇಂಥ ಅಪರೂಪದ ಖಗೋಳ ವಿದ್ಯಮಾನವನ್ನು `ಭೂಮಿಗೆ ಅತ್ಯಂತ ದೂರದ ಬಿಂದು~(ಆ್ಯಪಜಿ) ಎಂದು ಕರೆಯಲಾಗುತ್ತದೆ.
ಖಗೋಳ ವಿಜ್ಞಾನದಲ್ಲಿ ದೀರ್ಘ ವೃತ್ತವೊಂದರ ಎರಡು ತುತ್ತತುದಿಗಳನ್ನು `ಭೂಮಿಯಿಂದ ಅತ್ಯಂತ ದೂರದ ಬಿಂದು~ ಹಾಗೂ `ಅತ್ಯಂತ ಸನಿಹದ ಬಿಂದು~ ಎಂದು ಕರೆಯಲಾಗುತ್ತದೆ.

ಈಗಾಗಲೇ ಈ ವರ್ಷದಲ್ಲಿ ಅತ್ಯಂತ ಪ್ರಖರವಾದ ಹಾಗೂ ದೊಡ್ಡದಾದ ಹುಣ್ಣಿಮೆ ಚಂದ್ರನ ದರ್ಶನವಾಗಿದೆ. ಸಾಮಾನ್ಯವಾಗಿ 18 ವರ್ಷಗಳಿಗೊಮ್ಮೆ ಈ ವಿದ್ಯಮಾನ ಘಟಿಸುತ್ತದೆ. ಇತರ ಹುಣ್ಣಿಮೆ ಚಂದ್ರನಿಗೆ ಹೋಲಿಸಿದರೆ `ಸೂಪರ್ ಮೂನ್~ ಗಾತ್ರ ಸುಮಾರು ಶೇ 14 ರಷ್ಟು ಹೆಚ್ಚಿತ್ತು ಹಾಗೂ ಶೇ 30ರಷ್ಟು ಪ್ರಕಾಶಮಾನವಾಗಿತ್ತು ಎಂದು ದೇವಗನ್ ಹೇಳಿದ್ದಾರೆ.

`ಸೂಪರ್ ಮೂನ್~ ಭೂಮಿಯಿಂದ 3,56,577 ಕಿ.ಮೀ ದೂರದಲ್ಲಿತ್ತು. ಆದರೆ ಬುಧವಾರ ಕಾಣಿಸಿಕೊಳ್ಳುವ ಚಿಕ್ಕ ಚಂದಿರ ಇದಕ್ಕಿಂತಲೂ ಸುಮಾರು 50,000 ಕಿ.ಮೀ ದೂರದಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.