ನವದೆಹಲಿ (ಐಎಎನ್ಎಸ್): ಸೂಕ್ತ ಸಾಕ್ಷಿಗಳಿಲ್ಲದೇ ವರದಕ್ಷಿಣೆ ಸಾವು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಆರೋಪ ಹೋರಿಸದಂತೆ ಸುಪ್ರೀಂಕೊರ್ಟ್ ಗುರುವಾರ ಕೆಳಹಂತದ ನ್ಯಾಯಾಲಯಗಳಿಗೆ ತಾಕೀತುಮಾಡಿದೆ.

ಇಂತಹ ಪ್ರಕರಣಗಳಲ್ಲಿ ವರದಕ್ಷಿಣೆ ಕಿರುಕುಳದಿಂದಲೇ ಸಾವು ಸಂಭವಿಸಿದೆ ಅಥವಾ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಸಾಬೀತು ಪಡಿಸುವ ಸಾಕ್ಷಿ, ಪುರಾವೆಗಳಿದ್ದಲ್ಲಿ ಮಾತ್ರ ಕೊಲೆ ಪ್ರಕರಣ ದಾಖಲಿಸಿಕೊಳ್ಳಬೇಕು. ಪ್ರಕರಣದ ಸಾಕ್ಷಿ, ಪುರಾವೆಗಳ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ 302 ಅಡಿಯಲ್ಲಿ ಶಿಕ್ಷೆ ನೀಡಬೇಕೋ ಅಥವಾ 304ರ ಅಡಿ ಶಿಕ್ಷೆ ನೀಡಬೇಕೋ ಎಂದು ಕೋರ್ಟ್ಗಳು ತೀರ್ಮಾನಿಸಬೇಕು.

ಇನ್ನಿತರ ಕೊಲೆ ಪ್ರಕರಣಗಳಿಗೆ ಭಾರತೀಯ ದಂಡ ಸಂಹಿತೆ 302ರ ಅಡಿ ಶಿಕ್ಷೆ ನೀಡಿದರೆ, ವರದಕ್ಷಿಣೆ ಕಿರುಕುಳ ಸಾವಿಗೆ 304ರ ಅಡಿ ಶಿಕ್ಷೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.