ಹೈದರಾಬಾದ್: ಭಾರತೀಯ ಸರ್ವೇಕ್ಷಣಾ ಇಲಾಖೆಯು ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನ ಎತ್ತರವನ್ನು ಮತ್ತೆ ಅಳೆಯಲು ನಿರ್ಧರಿಸಿದೆ.

ಎರಡು ವರ್ಷಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ್ದ ಭಾರಿ ಭೂಕಂಪದಿಂದ ಎವರೆಸ್ಟ್‌ನ ಎತ್ತರ ಕಡಿಮೆಯಾಗಿರಬಹುದು ಎಂದು ಕೆಲವು ತಜ್ಞರು ಅನುಮಾನಪಟ್ಟಿದ್ದರು. ಪರ್ವತದ ಮರು ಅಳತೆ ನಡೆಸುವುದರಿಂದ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲಿದೆ ಎಂದು ಸರ್ವೇಯರ್ ಜನರಲ್ ಸ್ವರ್ಣ ಸುಬ್ಬಾ ರಾವ್ ಹೇಳಿದ್ದಾರೆ.

‘1855 ರಲ್ಲಿ ಎವರೆಸ್ಟ್‌ನ ಎತ್ತರವನ್ನು ಅಳೆಯಲಾಗಿತ್ತು. ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು. ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ. ಅದರ ಪ್ರಕಾರ ಎವರೆಸ್ಟ್ ಪರ್ವತ 29,028 ಅಡಿ ಎತ್ತರವಿದೆ’ ಎಂದು ತಿಳಿಸಿದ್ದಾರೆ.

‘ಎತ್ತರದ ಮರು ಅಳತೆ ಕೆಲಸ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ತಜ್ಞರ ತಂಡವನ್ನು ಬಳಸಿಕೊಳ್ಳಲಾಗುವುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಅಗತ್ಯವಿರುವ ಎಲ್ಲ ಕಡೆಯಿಂದ ಒಪ್ಪಿಗೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.