ನವದೆಹಲಿ: ಇಂದೋರ್–ಪಟ್ನಾ ಎಕ್ಸ್‌ಪ್ರೆಸ್ ರೈಲು ದುರಂತ ಪ್ರಕರಣದ ಪ್ರಮುಖ ಆರೋಪಿ ಸಂಶುಲ್ ಹೊಡಾ ಎಂಬಾತನನ್ನು ನೇಪಾಳ ಪೊಲೀಸರು ಕಾಠ್ಮಂಡು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಐಎಸ್‍ಐ ಶಂಕಿತ ಉಗ್ರ ಸಂಶುಲ್ ಹೊಡಾ ಅವರನ್ನು ದುಬೈನಿಂದ ಗಡಿಪಾರು ಮಾಡಲಾಗಿತ್ತು. ಹೊಡಾ ನೇಪಾಳಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣವೇ ಕಾರ್ಯಪ್ರವೃತ್ತರಾದ ನೇಪಾಳ ಪೊಲೀಸರ ವಿಶೇಷ ಪಡೆ ಹೊಡಾ ಜತೆ ಮೂವರು ಶಂಕಿತ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ ಎಂದು ಡಿಐಜಿ ಪಶುಪತಿ ಉಪಾಧ್ಯಾಯ ಹೇಳಿದ್ದಾರೆ.

ನವೆಂಬರ್ ತಿಂಗಳಲ್ಲಿ ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪುಖರಾಯಾಂ ಸಮೀಪ ಇಂದೋರ್–ಪಟ್ನಾ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ 150 ಮಂದಿ ಸಾವಿಗೀಡಾಗಿದ್ದರು. ರೈಲು ಹಳಿಗಳನ್ನು ಅಸ್ತವ್ಯಸ್ತ ಮಾಡಿ ದುರಂತ ಸಂಭವಿಸುವಂತೆ ಮಾಡಿದ್ದು ಹೊಡಾ ಸಂಚು ಆಗಿತ್ತು.

[related]

ಭಾರತದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹೊಡಾನನ್ನು ಬಂಧಿಸಲು ಭಾರತದ ಪೊಲೀಸರು ಮತ್ತು ನೇಪಾಳ ಪೊಲೀಸರು ಜಂಟಿ ಕಾರ್ಯಚರಣೆ ಮಾಡಿಜದ್ದರು ಎಂದು ಉಪಾಧ್ಯಾಯ ಹೇಳಿದ್ದಾರೆ.

ಹೊಡಾ ಜತೆಗೆ ಬಂಧಿತರಾದವರನ್ನು ಬೃಜ್ ಕಿಶೋರ್ ಗಿರಿ, ಆಶಿಶ್ ಸಿಂಗ್ ಮತ್ತು ಉಮೇಶ್ ಕುಮಾರ್ ಕುರ್ಮಿ ಎಂದು ಗುರುತಿಸಲಾಗಿದೆ. ಇವರೆಲ್ಲವೂ ದಕ್ಷಿಣ ನೇಪಾಳದ ಕಲೈಯಾ ಜಿಲ್ಲೆಯವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.