ನವದೆಹಲಿ (ಪಿಟಿಐ): ಆಂತರಿಕ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ಸರ್ಕಾರವು ರಾಜ್ಯಗಳನ್ನು ಸಂಪರ್ಕಿಸುತ್ತಿಲ್ಲ ಎಂದು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.

ಆಂತರಿಕ ಭದ್ರತೆಗೆ ಸಂಬಂಧಿಸಿದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನ ನಿಗ್ರಹ ಕೇಂದ್ರಕ್ಕೆ (ಎನ್ಸಿಟಿಸಿ) ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಸೇನೆ ಮತ್ತು ಕೇಂದ್ರದ ನಡುವಿನ ಇತ್ತೀಚಿನ ವಿವಾದವನ್ನೂ ಪ್ರಸ್ತಾಪಿಸಿ, ಇಂತಹ ಬೆಳವಣಿಗೆಗಳು ಆಂತರಿಕ ಭದ್ರತೆಗೆ ತೊಡಕುಂಟು ಮಾಡುತ್ತವೆ ಎಂದರು.

`ಮೀಸಲು ಪೊಲೀಸ್ ಪಡೆ (ಆರ್ಪಿಎಫ್) ಹಾಗೂ ಗಡಿ ಭದ್ರತಾ ಪಡೆ ಕಾಯ್ದೆಗಳಿಗೆ ತಿದ್ದುಪಡಿ ತರಲು ನಿರ್ಧರಿಸುವ ಮೂಲಕ ಅದು ರಾಜ್ಯದೊಳಗೇ ರಾಜ್ಯವನ್ನು ರಚಿಸುತ್ತಿದೆ~ ಎಂದು ಮೋದಿ ಗುಡುಗಿದರು.
ಸಭೆಗೆ ಗೈರು ಹಾಜರಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯ ಹಣಕಾಸು ಸಚಿವ ಅಮಿತ್ ಮಿತ್ರ ಅವರ ಮೂಲಕ ಕಳುಹಿಸಿದ್ದ ಪತ್ರದಲ್ಲಿ, `ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ.

ನಾನು ಈಗಾಗಲೇ ಈ ಬಗ್ಗೆ ನಿಮಗೆ (ಪ್ರಧಾನಿ ಸಿಂಗ್) ಪತ್ರ ಬರೆದಿದ್ದೇನೆ. ಮೇ 5ರಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ನನ್ನ ಅನಿಸಿಕೆಗಳನ್ನು ವಿವರವಾಗಿ ಹೇಳುತ್ತೇನೆ~ ಎಂಬ ಸಂದೇಶ ರವಾನಿಸಿದರು.

ಮನವೊಲಿಕೆಗೆ ಕಸರತ್ತು: ಸಮ್ಮೇಳನ ಉದ್ಘಾಟಿಸಿದ ಪ್ರಧಾನಿ ಮನಮೋಹನ್ ಸಿಂಗ್, `ಯಾವುದೇ ಸ್ವರೂಪದ ಭಯೋತ್ಪಾದನೆಯನ್ನು ನಿಯಂತ್ರಿಸಲು ಜಂಟಿ ಕಾರ್ಯಕ್ಕೆ ಕೈಜೋಡಿಸಲು ಕೇಂದ್ರವು ಸಿದ್ಧ~ ಎಂದು ಹೇಳುವ ಮೂಲಕ, ಎನ್ಸಿಟಿಸಿ ವಿರೋಧಿಸಿದ ರಾಜ್ಯಗಳ ಮನವೊಲಿಸುವ ಕಸರತ್ತು ಮಾಡಿದರು.

ಸಚಿವರ ಸ್ಪಷ್ಟನೆ: `ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯಗಳ ಮಧ್ಯೆ ಸಂಘರ್ಷವಿಲ್ಲ~ ಎಂದು ಗೃಹ ಸಚಿವ ಪಿ.ಚಿದಂಬರಂ ಸ್ಪಷ್ಟಪಡಿಸಿದರು. `2011ರಲ್ಲಿ 18 ಭಯೋತ್ಪಾದಕ ಗುಂಪುಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, 53 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ 2012ರ ಮೊದಲ ಮೂರು ತಿಂಗಳಿನಲ್ಲಿ ಮೂರು ಗುಂಪುಗಳನ್ನು ನಿಷ್ಕ್ರಿಯಗೊಳಿಸಿ, 11 ಮಂದಿಯನ್ನು ಬಂಧಿಸಲಾಗಿದೆ~ ಎಂದು ವಿವರಿಸಿದರು.
`ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಅರ್ಧದಷ್ಟು ಪ್ರಕರಣಗಳನ್ನು ಭೇದಿಸಲಾಗಿದೆ~ ಎಂದು ಹೇಳಿದರು.

ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಿಂದ ಎನ್ಸಿಟಿಸಿ ಸ್ಥಾಪನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಪಶ್ಚಿಮದಲ್ಲಿ ಆಂತರಿಕ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಈಗಲೂ ಅಪಾಯಕರ ಸನ್ನಿವೇಶವಿದೆ ಎಂದು ಆತಂಕ ವ್ಯಕ್ತಪಡಿಸಿದ ಚಿದಂಬರಂ, `ನೇಪಾಳ ಹಾಗೂ ಬಾಂಗ್ಲಾ ದೇಶದ ಮೂಲಕ ಅಕ್ರಮ ನುಸುಳುವಿಕೆಯ ಹೊಸ ಮಾರ್ಗಗಳು ತೆರೆದುಕೊಂಡಂತಿವೆ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.