ಕೋಲ್ಕತ್ತ (ಪಿಟಿಐ): ಭಾರತೀಯ ಕ್ರಿಕೆಟ್ ತಂಡ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಭಾರತೀಯ ಜನತಾ ಪಕ್ಷ ಪ್ರಸ್ತಾವ ಮುಂದಿಟ್ಟಿದೆ.

‘ನವೆಂಬರ್‌ತಿಂಗಳ ಮಧ್ಯಭಾಗದಲ್ಲಿ ನವದೆಹಲಿಯಲ್ಲಿ ಗಂಗೂಲಿ ಅವರೊಂದಿಗೆ ಪಕ್ಷ ಮುಖಂಡ ವರುಣ್ ಗಾಂಧಿ ಅವರು ಸಹಜವಾಗಿ ಈ ಬಗ್ಗೆ ಚರ್ಚಿಸಿದ್ದರು ’ಎಂದು ಪಶ್ವಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ ರಾಹುಲ್ ಸಿನ್ಹಾ ತಿಳಿಸಿದ್ದಾರೆ.

‘ಅವರು (ವರುಣ್) ಆಹ್ವಾನ ನೀಡಿದ್ದಾರೆ. ಆದರೆ ಗಂಗೂಲಿ ಅವರು ಪ್ರಸ್ತಾವದ ತಮ್ಮ ನಿರ್ಧಾರವನ್ನು ಸ್ಪಷ್ಟ ಪಡಿಸಿಲ್ಲ. ವಿಚಾರ ಮಾಡಿ ದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ’ ಎಂದು ಪಕ್ಷ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆಗಿರು ಸಿನ್ಹಾ ತಿಳಿಸಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ವರುಣ್ ಅವರು ಪಶ್ಚಿಮ ಬಂಗಾಳ ರಾಜ್ಯ ಉಸ್ತುವಾರಿಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.