ಎಂ.ಎಫ್.ಹುಸೇನರು ರಚಿಸಿದ ಕಲಾಕೃತಿಗಳ ಬಗ್ಗೆ ತಕರಾರುಗಳಿರಬಹುದು. ಆದರೆ ಅವರು ಬದುಕಿದ ರೀತಿಯನ್ನು ಹಾಗೂ ಅವರ ಜೀವನೋತ್ಸಾಹವನ್ನು ಮೆಚ್ಚದಿರುವುದು ಕಷ್ಟ. ಹುಸೇನ್ ಅಪಾರ ಜೀವನೋತ್ಸಾಹದ ವ್ಯಕ್ತಿಯಾಗಿದ್ದರು. ಬರಿಗಾಲಿನ ವಿರಾಗದ ಜೊತೆಗೆ ಸಿನಿಮಾ ನಟಿಯರ ಸೌಂದರ್ಯದ ಆರಾಧಕರೂ ಅವರಾಗಿದ್ದರು. ಅವರ ರಚನೆಗಳನ್ನು ನೋಡಿ ಕಲಾರಸಿಕರು ಬೆರಗುಗೊಂಡರೆ, ಸ್ವತಃ ಹುಸೇನ್ ಜೀವಂತ ಕಲಾಕೃತಿಗಳ ಬಗ್ಗೆ ಬೆರಗುಗಣ್ಣಾಗಿದ್ದರು. ಕಲಾಕೃತಿಗಳ ಮೂಲಕ ಕೋಟ್ಯಂತರ ರೂಪಾಯಿಗಳ ಜೊತೆಗೆ ಸಾಕಷ್ಟು ವಿವಾದಗಳೂ ಅವರನ್ನು ಹಿಂಬಾಲಿಸಿದ್ದವು. ಭಾರತೀಯ ಇತಿಹಾಸದಲ್ಲಿ ಇಂಥ ವರ್ಣರಂಜಿತ ಕಲಾವಿದ ಮತ್ತೊಬ್ಬರಿಲ್ಲ. ಹಟಮಾರಿತನ, ಅಮಾಯಕತೆ, ಪ್ರಯೋಗಶೀಲ ವ್ಯಕ್ತಿತ್ವ, ರಸಿಕತೆ- ಇವೆಲ್ಲವನ್ನೂ ಹುಸೇನ್ ತಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಂಡಿದ್ದರು. ಮೇಲ್ನೋಟಕ್ಕೆ ಋಷಿಸದೃಶರಾಗಿ ಕಾಣಿಸುತ್ತಿದ ಅವರು, ಬದುಕಿದ್ದು ಮಾತ್ರ ಉಪ್ಪುಹುಳಿ ತಿನ್ನುವ ಅಪ್ಪಟ ಮನುಷ್ಯನಾಗಿ.

ಹುಸೇನ್ರ ಪೂರ್ಣ ಹೆಸರು ಮಕ್ಬೂಲ್ ಫಿದಾ ಹುಸೇನ್. ಮಹಾರಾಷ್ಟ್ರದ ಮುಂಬಯಿ ಪ್ರಾಂತದ ಪಂಢರಪುರ ಅವರ ಹುಟ್ಟೂರು (ಜನನ: ಸೆ.17, 1915). ಒಂದೂವರೆ ವರ್ಷದ ಕೂಸಾಗಿದ್ದಾಗಲೇ ಅಮ್ಮನನ್ನು ಕಳೆದುಕೊಂಡ ಹುಡುಗನಿಗೆ ಬಾಲ್ಯದಿಂದಲೇ ರೇಖೆಗಳು ಹಾಗೂ ಬಣ್ಣದ ಸಾಂಗತ್ಯ ಹಿತವೆನ್ನಿಸತೊಡಗಿತ್ತು. ಅಂದಹಾಗೆ, ಬಾಲಕ ಹುಸೇನ್ ಒಬ್ಬ ಸ್ವಯಂ ಕಲಿಕೆಯ ವಿದ್ಯಾರ್ಥಿಯಾಗಿದ್ದರು.

ಎಳವೆಯಲ್ಲೇ ಕ್ಯಾಲಿಗ್ರಫಿಗೆ ಮರುಳಾಗಿದ್ದರು. ಬರೋಡಾದಲ್ಲಿ ಸೋದರ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಗ ಕವಿತೆ ಓದುವುದು, ಬರೆಯುವುದರ್ಲ್ಲಲಿ ಅವರಿಗೆ ಪ್ರೀತಿಯಿತ್ತು. ಸಮಯ ಸಿಕ್ಕಾಗಲೆಲ್ಲ ಸೈಕಲ್ ಮೇಲೇರಿ ಊರು ಸುತ್ತುತ್ತಿದ್ದರು. ಪರಿಸರದ ಬೆರಗು - ಬಾಗುಬಳಕುಗಳನ್ನು ತಮ್ಮ ರೇಖೆಗಳಿಗೆ ಒಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕಲಾವಿದನಾಗಿಯೇ ಬದುಕಬೇಕೆನ್ನುವ ಉಮೇದು ಅವರನ್ನು 1937ರಲ್ಲಿ ಮುಂಬಯಿಗೆ ಕರೆತಂದಿತು. ಹೆಣ್ಣುಮಕ್ಕಳು ಸರಕುಗಳಾಗಿದ್ದ ಪರಿಸರದಲ್ಲಿನ ಕಡಿಮೆ ಬಾಡಿಗೆಯ ಕೋಣೆಯೊಂದರಲ್ಲಿ ವಾಸಿಸುತ್ತ ಕಲೆಯ ದಾರಿಗಳನ್ನು ಹುಡುಕತೊಡಗಿದರು. ಜೆ.ಜೆ. ಕಲಾಶಾಲೆಯಲ್ಲಿ ಕಲಿಯುತ್ತಲೇ, ಜೀವನಕ್ಕಾಗಿ ಸಿನಿಮಾ ಪೋಸ್ಟರ್ಗಳನ್ನು ಬರೆಯತೊಡಗಿದರು. ಮುಂಬಯಿ ವಾಸ ಅವರನ್ನು ಕಲಾವಿದನಾಗಿ ಬೆಳೆಸುವ ಜೊತೆಗೆ ಬದುಕಿನ ಕಟು ವಾಸ್ತವದ ದರ್ಶನವನ್ನೂ ಮಾಡಿಸಿತು.

ಕಲಾವಿದ ಹುಸೇನರು ಮೊದಲ ಬಾರಿಗೆ ಸುದ್ದಿಯಾದದ್ದು 1947ರಲ್ಲಿ. `ಬಾಂಬೆ ಕಲಾ ಸಮಾಜ~ದ ವಾರ್ಷಿಕ ಪ್ರದರ್ಶನದ ಸ್ಪರ್ಧೆಯಲ್ಲಿ ಅವರ ಕಲಾಕೃತಿಗೆ ಬಹುಮಾನ ದೊರೆತಿತ್ತು. ಇದೇ ಸಮಯದಲ್ಲಿ `ಪ್ರಗತಿಪರ ಕಲಾವಿದರ ಬಳಗ~ವನ್ನು ಸೇರಿಕೊಳ್ಳುವಂತೆ ಅವರಿಗೆ ಆಹ್ವಾನ ಬಂತು. ಬಂಗಾಳದ ಕಲಾಶಾಲೆಯ ಸಾಂಪ್ರದಾಯಿಕ ತತ್ವಗಳನ್ನು ಮುರಿದು ಹೊಸ ಕಲಾಪ್ರಕಾರವೊಂದನ್ನು ಕಟ್ಟುವ ಉತ್ಸಾಹದಲ್ಲಿದ್ದ ಯುವ ಕಲಾವಿದರ ಬಳಗವಿದು. ಭಾರತದ ಕಲಾಪ್ರಪಂಚವನ್ನು ನವ್ಯದ ಗಾಳಿಗೆ ಸಜ್ಜುಗೊಳಿಸುವ ಪ್ರಯತ್ನದಲ್ಲಿದ್ದ ಈ ಸಂಘಟನೆಯ ಪ್ರಭಾವ ಹುಸೇನರ ಕುಂಚಕ್ಕೆ ಹೊಸ ಕಣ್ಣುಗಳನ್ನು ತಂದುಕೊಟ್ಟಿತು. ವಿವಿಧ ಕಲಾಪ್ರಕಾರಗಳನ್ನು ಮುರಿದು ಕಟ್ಟಿ, ತಮ್ಮದೇ ಛಾಪೊಂದನ್ನು ಅವರು ಗಳಿಸಿಕೊಂಡರು. ಅವರ ಪ್ರಯೋಗಗಳ ತೀವ್ರತೆ ಎಷ್ಟಿತ್ತೆಂದರೆ, 1950ರ ವೇಳೆಗಾಗಲೇ ದೇಶದ ಮುಂಚೂಣಿ ಕಲಾವಿದರಲ್ಲೊಬ್ಬರಾಗಿ ಹುಸೇನ್ ಬೆಳೆದಿದ್ದರು. ದೇಶದ ಪ್ರಮುಖ ನಗರಗಳಲ್ಲಿ, ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಅವರ ಕಲಾಕೃತಿಗಳು ಗಮನಸೆಳೆದವು. 1952ರಲ್ಲಿ ಹುಸೇನರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ ಜೂರಿಚ್ನಲ್ಲಿ ಜರುಗಿತು. ಇದಾದ ನಂತರ ಅಮೆರಿಕ ಮತ್ತು ಯುರೋಪ್ಗಳಲ್ಲಿ ಅವರ ಕಲಾಕೃತಿಗಳಿಗೆ ಬೇಡಿಕೆ ಒದಗಿತು. ಭಾರತೀಯ ಪುರಾಣ ಪಾತ್ರ ಆಧುನಿಕ ಸಂವೇದನೆಗಳ ಸ್ಪರ್ಶದೊಂದಿಗೆ ಚಿತ್ರಿಸುವ ಪ್ರಯತ್ನ ನಡೆಸಿದರು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಗೌರವಗಳು ಅವರನ್ನು ಹುಡುಕಿಕೊಂಡು ಬಂದವು. 1986ರಲ್ಲಿ ರಾಜ್ಯಸಭೆಗೆ ನಾಮಕರಣಗೊಂಡ ಗೌರವವೂ ಅವರದಾಗಿತ್ತು.
ಸಿನಿಮಾ ಹುಸೇನರ ಆಸಕ್ತಿಯ ಇನ್ನೊಂದು ಕ್ಷೇತ್ರ. ಅವರ ಚಿತ್ರ `ಥ್ರೂ ದಿ ಐಸ್ ಆಫ್ ದಿ ಪೇಂಟರ್~ (1963) ಬರ್ಲಿನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತ್ತು. ಮಾಧುರಿ ದೀಕ್ಷಿತ್ ನಾಯಕಿಯಾಗಿರುವ `ಗಜಗಾಮಿನಿ~ ಅವರ ಇನ್ನೊಂದು ಪ್ರಸಿದ್ಧ ಚಿತ್ರ. `ಮೀನಾಕ್ಷಿ: ಎ ಟೇಲ್ ಆಫ್ ಥ್ರೀ ಸಿಟೀಸ್~ ವಿವಾದಕ್ಕೆ ಕಾರಣವಾದ ಸಿನಿಮಾ. ತಾವು ಮೆಚ್ಚಿದ ನಾಯಕಿಯರೊಂದಿಗೆ ಸಿನಿಮಾ ಮಾಡಲು ಹುಸೇನ್ ಹಂಬಲಿಸುತ್ತಿದ್ದರು. ಬಾಲಿವುಡ್ ಚೆಲುವೆಯರಾದ ಮಾಧುರಿ ದೀಕ್ಷಿತ್, ಟಬು, ಅಮೃತಾ ರಾವ್, ವಿದ್ಯಾ ಬಾಲನ್ರಿಂದ ಹಿಡಿದು ಇತ್ತೀಚಿನ ಅನುಷ್ಕಾ ಶರ್ಮರವರೆಗೆ ಅವರ ಸೌಂದರ್ಯದ ಆರಾಧನೆ ಸಾಗಿತ್ತು.

1970ರ ಅವಧಿಯಲ್ಲಿ ಅವರು ರಚಿಸಿದ ಕೆಲವು ಕಲಾಕೃತಿಗಳು, ಇಪ್ಪತ್ತೈದು ವರ್ಷಗಳ ನಂತರ ವಿವಾದಕ್ಕೆ ಕಾರಣವಾದವು. ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎನ್ನುವ ಆರೋಪ ಹುಸೇನರ ಹೆಗಲೇರಿತು. ಸರಸ್ವತಿ ಮತ್ತು ದುರ್ಗೆಯರನ್ನು ವಿರೂಪವಾಗಿಸಿದ್ದಾರೆ, ಭಾರತಮಾತೆಯನ್ನು ವಿಕೃತವಾಗಿ ಚಿತ್ರಿಸಿದ್ದಾರೆ ಎಂದು ಹಿಂದೂ ಸಮುದಾಯದ ಪ್ರತಿರೋಧ ಹಾಗೂ ಕಾನೂನು ಮೊಕದ್ದಮೆಗಳನ್ನು ಅವರು ಎದುರಿಸಬೇಕಾಯಿತು (ವರದಿಯೊಂದರ ಪ್ರಕಾರ, ಸಾವಿರಕ್ಕೂ ಹೆಚ್ಚು ಮೊಕದ್ದಮೆಗಳು ಹುಸೇನರ ಮೇಲೆ ದಾಖಲಾಗಿದ್ದವು). ಹಿಂದೂ ಸಂಘಟನೆಗಳು ಅವರ ಮನೆಯ ಮೇಲೆ ದಾಳಿ ನಡೆಸಿದವು. ಕಲಾಕೃತಿಗಳನ್ನು ನಾಶಪಡಿಸಿದವು. ಕೇರಳ ಸರ್ಕಾರದಿಂದ `ರಾಜಾ ರವಿವರ್ಮ~ ಪ್ರಶಸ್ತಿ ದೊರೆತಾಗಲೂ ಹುಸೇನರ ವಿರುದ್ಧ ಅಪಸ್ವರಗಳು ಕೇಳಿಸಿದ್ದವು. ಈ ಘಟನೆಗಳಿಂದ ನೊಂದ ಅವರು ಭಾರತವನ್ನು ತೊರೆಯುವ ನಿರ್ಧಾರ ಕೈಗೊಂಡರು. ಕತಾರ್ ನೀಡಿದ ಪೌರತ್ವವನ್ನು ಒಪ್ಪಿಕೊಂಡರು. ಲಂಡನ್ ಮತ್ತು ದುಬೈಗಳನ್ನು ವಾಸಸ್ಥಾನಗಳನ್ನಾಗಿಸಿಕೊಂಡರು.

ಕತಾರ್ನ ಪೌರತ್ವ ಕೂಡ ವಿವಾದದಿಂದ ಮುಕ್ತವೇನೂ ಆಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಅರಬ್ ಶೇಕ್ ಒಬ್ಬರನ್ನು ಹುಸೇನ್ ಬೆತ್ತಲಾಗಿ ಚಿತ್ರಿಸಿದ್ದರು. ಈ ವಿಷಯ ಪೌರತ್ವದ ಸಂದರ್ಭದಲ್ಲಿ ಮತ್ತೆ ಚರ್ಚೆಗೆ ಬಂತು. ಆದರಿದು ಹುಸೇನರ ಪೌರತ್ವದ ಬದಲಾವಣೆಗೆ ಅಡ್ಡಿಯಾಗುವಷ್ಟು ತೀವ್ರವಾಗಿರಲಿಲ್ಲ.

ತಾಯ್ನೆಲವನ್ನು ತೊರೆಯುವ ನಿರ್ಧಾರ ತೆಗೆದುಕೊಳ್ಳುವುದು ಹುಸೇನರಿಗೆ ಸುಲಭವಾಗಿರಲಿಲ್ಲ. ಮೂಲಭೂತವಾದಿ ಸಂಘಟನೆಗಳು ತಮ್ಮ ತೇಜೋವಧೆ ಮಾಡುವಾಗ ದೇಶದ ಪ್ರಜ್ಞಾವಂತ ವಲಯ ಮೌನವಾಗಿದ್ದುದು ಹಾಗೂ ಕಲೆಯ ಬಗೆಗಿನ ತಮ್ಮ ಬದ್ಧತೆಯೇ ಪ್ರಶ್ನೆಗೀಡಾದುದು ಅವರಿಗೆ ನೋವು ತಂದಿತ್ತು. `ಈ ದೇಶಕ್ಕೆ ನನ್ನ ಅಗತ್ಯವಿದ್ದಂತೆ ಕಾಣುತ್ತಿಲ್ಲ. ಆದರೆ, ಭಾರತವನ್ನು ನಾನು ಈಗಲೂ ಪ್ರೀತಿಸುತ್ತೇನೆ.ನಾನು ಯಾವತ್ತಿಗೂ ಭಾರತೀಯ ಸಂಜಾತ ಕಲಾವಿದ~ ಎಂದು ದೇಶದಿಂದ ಹೊರನಡೆಯುವಾಗ ಹೇಳಿದ್ದರು.

ಹುಸೇನರ ಕಲಾಕೃತಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ವಿವಾದಗಳು ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದವು. ಈ ಪ್ರಸಂಗಗಳು- ಪ್ರಜಾಪ್ರಭುತ್ವದ ವಿಶೇಷವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಭಾರತೀಯ ಸಂಸ್ಕೃತಿಯ ತಳಹದಿ ಎನ್ನಲಾದ ಸಹನಶೀಲತೆಯನ್ನು ಒರೆಗೆ ಹಚ್ಚುವಂತಿದ್ದವು. ಆದರೆ, ಆರೋಗ್ಯಕರ ಚರ್ಚೆ ಸಾಧ್ಯವೇ ಆಗದೆ ಹುಸೇನರು ತಾಯ್ನೆಲದ ಸಂಬಂಧ ಕಡಿದುಕೊಂಡರು. `ಭಾರತದ ಪಿಕಾಸೊ~ ಎನ್ನುವ ಬಣ್ಣನೆಗೊಳಗಾಗಿದ್ದ ಹುಸೇನರು ಅಂತರರಾಷ್ಟ್ರೀಯ ಕಲಾ ಮಾರುಕಟ್ಟೆಯಲ್ಲಿ ಭಾರತದ ನಂ.1 ವರ್ಣಚಿತ್ರಕಾರ. ಜಾಗತಿಕ ಮಟ್ಟದಲ್ಲಿ ಅವರು ಭಾರತೀಯ ಕಲೆಯ ರಾಯಭಾರಿ.

ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ ಹುಸೇನರ ಅಭಿರುಚಿಯನ್ನು ಕಿಡಿಗೇಡಿತನವೆಂದು ಕರೆಯುವವರಿದ್ದಾರೆ. ವಿವಾದಗಳ ಕಾರಣದಿಂದಾಗಿ ದೇಶವನ್ನೇ ತೊರೆದ ಅವರ ದೇಶಭಕ್ತಿಯನ್ನು ಪ್ರಶ್ನಿಸುವವರೂ ಇದ್ದಾರೆ. ಅವರ ಸೌಂದರ್ಯಪ್ರಜ್ಞೆಯನ್ನು ಚಪಲ ಎಂದವರಿದ್ದಾರೆ. ಆದರೆ, ಎಲ್ಲ ತಕರಾರುಗಳನ್ನು ಮೀರಿ ನಿಲ್ಲುವಂತಹದ್ದು ಹುಸೇನರ ಸಾಧನೆ. ಸಮಕಾಲೀನ ಚಿತ್ರಕಲೆಯ ಶ್ರೇಷ್ಠ ಪ್ರತಿನಿಧಿಯಾಗಿದ್ದವರು ಅವರು. ಭಾರತೀಯ ಕಲೆಗೆ ಜಾಗತಿಕ ಮನ್ನಣೆ ತಂದುಕೊಟ್ಟ ಅಗ್ಗಳಿಕೆ ಅವರಿಗೆ ಸಲ್ಲಬೇಕು. ತಮಗೆ ತೋಚಿದಂತೆ ಬದುಕಿದ ಹುಸೇನ್ ತೊಂಬತ್ತೈದರ ಇಳಿವಯಸ್ಸಿನಲ್ಲೂ ಪ್ರಖರ ಜೀವನೋತ್ಸಾಹ ಉಳಿಸಿಕೊಂಡಿದ್ದರು. ಈಚೆಗಷ್ಟೇ, ಲಂಡನ್ನಲ್ಲಿ ನಡೆದ ಹರಾಜೊಂದರಲ್ಲಿ ಹುಸೇನರ ಕಲಾಕೃತಿಯೊಂದು 2.32 ಕೋಟಿ ರೂಪಾಯಿಗೆ ಮಾರಾಟವಾಗಿತ್ತು.

ಇನ್ನುಮುಂದೆ ಅಂತರರಾಷ್ಟ್ರೀಯ ಕಲಾ ಮೊಗಸಾಲೆಗಳಲ್ಲಿ, ಹೂವಿನ ಪಕಳೆಗಳು ಅರಳಿಕೊಂಡಂತೆ ಕಾಣಿಸುತ್ತಿದ್ದ ವಿಶಿಷ್ಟ ಬಿಳಿಗೂದಲು ಹಾಗೂ ಗಡ್ಡದ ಹುಸೇನರನ್ನು ಕಾಣುವಂತಿಲ್ಲ. ವಿವಾದಗಳೂ ಇಲ್ಲ. ವಿವಾದಾಸ್ಪದ ಚಿತ್ರಗಳ ರಚನೆಯಾಗದೆ ಇದ್ದಿದ್ದರೆ ಹುಸೇನರು ಭಾರತೀಯ ಜನಮಾನಸದಲ್ಲಿ ಬಹುದೊಡ್ಡ ಸ್ಥಾನ ಗಳಿಸುತ್ತಿದ್ದರಾ ಎನ್ನುವಂಥ ಪ್ರಶ್ನೆಗಳು ಈಗ ಉಳಿದುಹೋಗಿವೆ. ಹೋರ್ಡಿಂಗ್ಗಳನ್ನು ಬರೆಯುತ್ತಿದ್ದ ಸಾಧಾರಣ ತರುಣನೊಬ್ಬ ಬಹುದೊಡ್ಡ ಕಲಾವಿದನಾಗಿ ಬೆಳೆದ ದಂತಕಥೆಗೀಗ ಪೂರ್ಣವಿರಾಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.