ಛಪ್ರಾ (ಬಿಹಾರ) (ಪಿಟಿಐ): ಮಹಾರಾಜಗಂಜ್ ಲೋಕಸಭಾ ಉಪಚುನಾವಣೆಯಲ್ಲಿ ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮುನ್ನಡೆ ಸಾಧಿಸಿದ್ದು, ಪಕ್ಷದ ಅಭ್ಯರ್ಥಿ ಪ್ರಭುನಾಥ ಸಿಂಗ್ ಅವರು ನಾಲ್ಕನೇ ಸುತ್ತಿನ ಮತ ಎಣಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜನತಾದಳ (ಯು) ಅಭ್ಯರ್ಥಿಗಿಂತ 27,000 ಮತಗಳಿಂದ ಮುಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸ್ವಾಮಿ ಸಾಕಷ್ಟು ಹಿಂದೆ ಬಿದ್ದಿದ್ದಾರೆ.

ನಾಲ್ಕನೇ ಸುತ್ತಿನ ಮತಗಳ ಎಣಿಕೆ ಬಳಿಕ ಪ್ರಭುನಾಥ ಸಿಂಗ್ ಅವರು 85,455 ಮತಗಳನ್ನು ಗಳಿಸಿದರೆ, ಜನತಾದಳ (ಯು) ಅಭ್ಯರ್ಥಿ ಪಿ.ಕೆ. ಶಾಹಿ 57,629 ಮತ ಗಳಿಸಿದ್ದರು. ಕಾಂಗ್ರೆಸ್ಸಿನ ಜಿತೇಂದ್ರ ಸ್ವಾಮಿ ಕೇವಲ 9058 ಮತಗಳಿಸಲು ಶಕ್ತರಾದರು.

ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸ್ವಾಮಿ ಅವರ ತಂದೆ ಆರ್ ಜೆಡಿ ಸಂಸತ್ ಸದಸ್ಯ ಉಮಾಶಂಕರ ಸಿಂಗ್ ನಿಧನದ ಕಾರಣ ಇಲ್ಲಿ ಉಪಚುನಾವಣೆ ನಡೆದಿತ್ತು.

ಪಕ್ಷದ ಅಭ್ಯರ್ಥಿಯ ಮುನ್ನಡೆಯಿಂದ ಬೀಗಿದ ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್, ಪಟ್ನಾ ಮತ್ತು ಮಹಾರಾಜಗಂಜ್ ಫಲಿತಾಂಶವು ನಿತೀಶ್ ಕುಮಾರ್ ಸರ್ಕಾರದ ಪತನಕ್ಕೆ ನಾಂದಿಯಾಗಲಿದೆ ಎಂದು ಹೇಳಿದರು. ಇದು 2014ರಲ್ಲಿ ಬಿಹಾರಿನಲ್ಲಿ 14 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ದಿಕ್ಸೂಚಿ ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.