ತಿರುಪತಿ: ಶ್ರೀಕಾಳಹಸ್ತಿಯಿಂದ ತಿರುಪತಿ ಕಡೆಗೆ ಹೊರಟಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ 20 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ತಿರುಪತಿಯಿಂದ 25 ಕಿ.ಮೀ. ದೂರದಲ್ಲಿ ಶ್ರೀಕಾಳಹಸ್ತಿ ಹೆದ್ದಾರಿಯಲ್ಲಿನ ಎರ್ಪೆಡು ವಲಯದಲ್ಲಿ ಅಪಘಾತ ನಡೆದಿದೆ. ಶುಕ್ರವಾರ ಶ್ರೀಕಾಳಹಸ್ತಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಎರ್ಪೆಡು ಪೊಲೀಸ್ ಠಾಣೆಯ ಮುಂಭಾಗದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.

ಲಾರಿ ಡಿಕ್ಕಿಯಾದ ರಭಸಕ್ಕೆ ಕಂಬ ಹಾಗೂ ತಂತಿ ತುಂಡಾಗಿದ್ದು, ಸುತ್ತಲೂ ವಿದ್ಯುತ್ ಪ್ರವಹಿಸಿದೆ. ಈ ಕಾರಣದಿಂದಾಗಿ ರಕ್ಷಣೆಗೆ ಧಾವಿಸಿದ ಸ್ಥಳೀಯರು ವಿದ್ಯುತ್ ಹರಿಯುವಿಕೆಗೆ ಸಿಲುಕಿ ಮೃತ ಪಟ್ಟಿದ್ದಾರೆ.

ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಅಂಗಡಿಗಳಿಗೂ ಹಾನಿ ಮಾಡಿದೆ. ಅಪಘಾತ ಹಾಗೂ ವಿದ್ಯುತ್ ಹರಿದು ಸತ್ತವರ ಸಂಖ್ಯೆ 20ಕ್ಕೆ ಏರಿದ್ದು, ಗಾಯಾಳುಗಳ ಸಂಖ್ಯೆಯೂ 20 ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.