ನವದೆಹಲಿ (ಪಿಟಿಐ):  `1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಮುಂಚೆ ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ದುಬೈನಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ತಾವು ಪಾಲ್ಗೊಂಡಿದ್ದು ನಿಜ, ಆದರೆ ಆತನೊಂದಿಗೆ ತಾವು ಯಾವುದೇ ಸಂಪರ್ಕ ಹೊಂದಿಲ್ಲ~ ಎಂದು ಬಾಲಿವುಡ್ ನಟ ಸಂಜಯ ದತ್ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದರು.

`ದಾವೂದ್ ತನ್ನ ಮನೆಯಲ್ಲಿ ಏರ್ಪಡಿದ್ದ ಭೋಜನಕೂಟದಲ್ಲಿ ಇಬ್ಬರು ಚಿತ್ರ ನಿರ್ಮಾಪಕರೊಂದಿಗೆ ಪಾಲ್ಗೊಂಡಿದ್ದೆ, ಇಷ್ಟನ್ನು ಬಿಟ್ಟರೆ ದಾವೂದ್ ಜತೆ ನನಗೇನೂ ಸಂಪರ್ಕ ಇಲ್ಲ~ ಎಂದು ದತ್ ಪರವಕೀಲ ಹರೀಶ್ ಸಾಳ್ವೆ ತಿಳಿಸಿದರು.
1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಿಂದ ಮುಕ್ತರಾಗಿದ್ದರೂ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡ ದೂರಿನ ಅನ್ವಯ ದತ್‌ಗೆ 6 ವರ್ಷ ಶಿಕ್ಷೆಯಾಗಿದ್ದು ಜಾಮೀನು ಸಿಕ್ಕಿದೆ. ಶಿಕ್ಷೆ ರದ್ದುಪಡಿಸುವಂತೆ ದತ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ಈಗ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.