ನವದೆಹಲಿ (ಪಿಟಿಐ): ಸತತ 15 ವರ್ಷಗಳ ಕಾಲ ದೆಹಲಿಯಲ್ಲಿ ರಾಜ್ಯಭಾರ ನಡೆಸಿದ್ದ ಶೀಲಾ ದೀಕ್ಷಿತ್ ಅವರು, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾನುವಾರ ಸೋಲು ಕಂಡಿದ್ದಾರೆ. ಸೋಲು ಖಚಿತಗೊಳ್ಳುತ್ತಿದ್ದಂತೆ ದೀಕ್ಷಿತ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ನಜೀಬ್ ಜುಂಗ್ ಅವರಿಗೆ ಶೀಲಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ದೀಕ್ಷಿತ್ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

ದೆಹಲಿ ವಿಧಾನಸಭೆ ವಿಸರ್ಜನೆ: ದೆಹಲಿ ವಿಧಾನಸಭೆಯನ್ನು ಭಾನುವಾರ ವಿಸರ್ಜನೆ ಗೊಳಿಸಿರುವ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜುಂಗ್, ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ರವಾನಿಸಿದ್ದಾರೆ.

‘ಇಂದಿನಿಂದ ಅನ್ವಯಿಸುವಂತೆ(ಡಿಸೆಂಬರ್8, 2013) ದೆಹಲಿ ವಿಧಾನಸಭೆಯ ನಾಲ್ಕನೇ ಶಾಸಕಾಂಗವನ್ನು ನಜೀಬ್ ಅವರು ವಿಸರ್ಜಿಸಿದ್ದಾರೆ. ದೀಕ್ಷಿತ್ ಅವರ ರಾಜೀನಾಮೆ ಪತ್ರವನ್ನು ’ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.