ನವದೆಹಲಿ (ಪಿಟಿಐ): ಗ್ರಾಹಕರೊಬ್ಬರಿಗೆ ನಿಗದಿತ ಅವಧಿಯೊಳಗೆ ಹಣ ಮರುಪಾವತಿ ಮಾಡಲು ವಿಳಂಬ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ದೂರುದಾರನಿಗೆ ರೂ 34 ಸಾವಿರ ಪಾವತಿಸಬೇಕು ಎಂದು ಗ್ರಾಹಕರ ವೇದಿಕೆ ಸೋಮವಾರ ನಿರ್ದೇಶನ ನೀಡಿದೆ.

ಈ ಕುರಿತ ದೂರನ್ನು ಪರಿಶೀಲಿಸಿದ ಈಶಾನ್ಯ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ನಿವಾರಣಾ ವೇದಿಕೆ, ಏಳು ದಿನಗಳೊಳಗೆ ಗ್ರಾಹಕನಿಗೆ ಮರುಪಾವತಿ ಮಾಡಬೇಕಾದ ಹಣವನ್ನು 189 ದಿನಗಳಾದರೂ ಮಾಡದೇ ಇರುವುದು ಆರ್ಬಿಐ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ದೂರುದಾರರಾದ ದೆಹಲಿ ಮೂಲದ ಸುಬೋಧ್ ಕುಮಾರ್ ಅವರಿಗೆ ದಿನಕ್ಕೆ ರೂ100ರಂತೆ 189 ದಿನಗಳಿಗೆ ತಗಲುವ ಒಟ್ಟು ರೂ 18,900 ಮರುಪಾವತಿ ಜೊತೆಗೆ, ಪರಿಹಾರವಾಗಿ ರೂ 16 ಸಾವಿರ ಸೇರಿದಂತೆ ಒಟ್ಟು ರೂ 34 ಸಾವಿರ ಪಾವತಿಸುವಂತೆ ಎನ್.ಎ. ಜೈದಿ ನೇತೃತ್ವದ ಗ್ರಾಹಕ ವೇದಿಕೆ ಎಸ್ಬಿಐಗೆ ಸೂಚಿಸಿದೆ.

ದೂರಿನ ಹಿನ್ನೆಲೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರಾದ ಸುಬೋಧ್ ಕುಮಾರ್ ಎಂಬುವವರು ಫೆಬ್ರುವರಿ 23, 2012ರಂದು ತಮ್ಮ ಎಟಿಎಂ ಕಾರ್ಡ್ನಿಂದ ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂನಲ್ಲಿ ರೂ 10 ಸಾವಿರ ಹಣ ಪಡೆಯಲು ಕಾರ್ಡ್ ಹಾಕಿದಾಗ, ಹಣ ಬಂದಿರಲಿಲ್ಲ. ಆದರೆ ಕುಮಾರ್ ಅವರ ಖಾತೆಯಿಂದ ರೂ 10 ಸಾವಿರ ಹಣ ಕಡಿತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.