ಮುಂಬೈ (ಪಿಟಿಐ): ಬಣ್ಣದ ಬದುಕು ಆರಿಸಿಕೊಂಡಿರುವ ಹೆಸರಾಂತ ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಒಂದು ಕಾಲದಲ್ಲಿ ಬಣ್ಣಗಳ ಹಬ್ಬ ‘ಹೋಳಿ’ ಎಂದರೆ ಎಲ್ಲಿಲ್ಲದ ಭಯವಂತೆ! ಅಮೀರ್ ಅವರು ಹುಟ್ಟಿದ್ದೇ ಹೋಳಿ ಹಬ್ಬದ ದಿನ ಎಂಬುದು ಬಹುತೇಕರಿಗೆ ತಿಳಿದಿಲ್ಲ. 1965ರ ಮಾರ್ಚ್ 14ರಂದು ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಅವರು ಹುಟ್ಟಿದರೂ, ಈ ಹೆಸರಾಂತ ನಟ ಬಣ್ಣಗಳಿಂದ ಕೆಲ ಕಾಲ ದೂರವೇ ಉಳಿದಿದ್ದರು.

‘ನಾನು ಹುಟ್ಟಿದ ದಿನ ಆಸ್ಪತ್ರೆಯ ದಾದಿ ಬಂದು ನನ್ನ ಮುಖಕ್ಕೆ ಬಣ್ಣ ಹಚ್ಚಿ ಹೋಗಿದ್ದಾಗಿ ನನ್ನ ಅಮ್ಮಿ (ತಾಯಿ) ಹೇಳುತ್ತಿದ್ದರು. ಆದರೆ ಚಿಕ್ಕವನಾಗಿದ್ದಾಗ ನಾನು ಹೋಳಿ ಹಬ್ಬ ಎಂದರೆ ಸಾಕು ಭಯಬೀಳುತ್ತಿದ್ದೆ. ಬಣ್ಣ ಮೆತ್ತಿಕೊಂಡ ಮುಖಗಳು ಮತ್ತು ಹೋಳಿ ಆಡುವಾಗ ಕಿರುಚಾಡುವವರನ್ನು ಕಂಡು ಹೆದರಿ ಮನೆಯಿಂದ ಆಚೆ ಬರುತ್ತಲೇ ಇರಲಿಲ್ಲ’ ಎಂದು ಅಮೀರ್ ಸ್ಮರಿಸಿದ್ದಾರೆ.

ಆದರೆ ಹರಯಕ್ಕೆ ಬರುತ್ತಿದ್ದಂತೆಯೇ ಅವರ ಬಣ್ಣದ ಭಯ ತಾನೇತಾನಾಗಿ ಕಣ್ಮರೆಯಾಯಿತು. ‘ನನಗೆ 14- 15 ವರ್ಷವಾದಾಗ ಯಾವುದೇ ಭಯವಿಲ್ಲದೆ ಗೆಳೆಯರೊಂದಿಗೆ ಸೇರಿ ಹೋಳಿ ಸಂಭ್ರಮದಲ್ಲಿ ಮಿಂದೆದ್ದಿದ್ದೆ. ಈಗಲೂ ಸಹ ಕುಟುಂಬದವರೊಂದಿಗೆ ಹೋಳಿ ಆಚರಿಸುತ್ತೇನೆ’ ಎಂದು 46 ವರ್ಷದ ಅಮೀರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.