ಚಂಡೀಗಡ (ಪಿಟಿಐ): ಹರಿಯಾಣದಲ್ಲಿ ಸರಳ ಬಹುಮತ ಪಡೆದು ಅಧಿಕಾರ ಹಿಡಿಯಲು ಸಿದ್ಧವಾಗಿರುವ ಬಿಜೆಪಿಗೆ ನಾಲ್ವರು ಶಾಸಕರು ಬೆಂಬಲ ನೀಡಿದ್ದಾರೆ.
ಬಹುಜನ ಸಮಾಜ ಪಕ್ಷದಿಂದ ಆಯ್ಕೆಯಾಗಿರುವ ಏಕೈಕ ಶಾಸಕ ತೇಕ್ ಚಂದ್ ಶರ್ಮ ಮತ್ತು ಮೂವರು ಪಕ್ಷೇತರ ಶಾಸಕರು ಬೆಂಬಲ ನೀಡಿರುವವರು.
90 ಕ್ಷೇತ್ರಗಳ ವಿಧಾನಸಭೆಗೆ 47 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಈ ನಾಲ್ವರು ಬೆಂಬಲ ನೀಡಿರುವುದರಿಂದ, ಅದರ ಒಟ್ಟು ಸದಸ್ಯ ಬಲ 51ಕ್ಕೆ ಏರಲಿದೆ.