ನವದೆಹಲಿ (ಪಿಟಿಐ): ಬೆಂಗಳೂರು- ಚೆನ್ನೈ ಹಾಗೂ ಹಬಿಬ್ಗಂಜ್- ಇಂದೋರ್ ನಡುವೆ ಡಬಲ್ ಡೆಕ್ಕರ್ ಹವಾನಿಯಂತ್ರಿತ (ಏಸಿ) ರೈಲು ಮತ್ತು ಹೌರಾ- ನ್ಯೂ ಜಲ್ಪೈಗುರಿ ನಡುವೆ ಶತಾಬ್ದಿ ರೈಲು ಸೇರಿದಂತೆ 72 ಹೊಸ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು 2012-13ನೇ ಸಾಲಿನ ರೈಲ್ವೆ ಬಜೆಟ್ನಲ್ಲಿ ಘೋಷಿಸಲಾಗಿದೆ.

ಚೊಚ್ಚಲ ಬಜೆಟ್ ಮಂಡಿಸಿದ ದಿನೇಶ್ ತ್ರಿವೇದಿ ಅವರು ಈಶಾನ್ಯ ರಾಜ್ಯಗಳಿಗೂ ಆದ್ಯತೆ ನೀಡಿದ್ದಾರೆ. ದಿಬ್ರೂಗಡ- ಕೋಲ್ಕತ್ತ ಎಕ್ಸ್ಪ್ರೆಸ್, ಕಾಮಾಕ್ಯಾ- ಲೋಕಮಾನ್ಯ ತಿಲಕ್ ಎಸಿ ರೈಲು ಕಾಮಾಕ್ಯಾ- ತೇಜ್ಪುರ ಇಂಟರ್ ಸಿಟಿ ರೈಲುಗಳ ಸಂಚಾರವನ್ನು ಅವರು ಪ್ರಕಟಿಸಿದ್ದಾರೆ.

ಮುಂಬೈ ಲೋಕಲ್ ರೈಲು ಸೇವೆಗೆ ಹೆಚ್ಚುವರಿಯಾಗಿ 75 ರೈಲು, ಚೆನ್ನೈ ಲೋಕಲ್ ರೈಲಿಗೆ 18 ಹಾಗೂ ಕೋಲ್ಕತ್ತ ಮೆಟ್ರೊಗೆ 50 ಹೆಚ್ಚುವರಿ ರೈಲುಗಳನ್ನು ತ್ರಿವೇದಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.