ನವದೆಹಲಿ: ಮುಂದಿನ ತಿಂಗಳು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಉಭಯ ರಾಷ್ಟ್ರಗಳ ಗೃಹ ಕಾರ್ಯದರ್ಶಿಗಳ ಮಾತುಕತೆ ವೇಳೆ ಭಾರತ ಮತ್ತು ಪಾಕಿಸ್ತಾನಗಳು ಮುಕ್ತ ವೀಸಾ ಒಪ್ಪಂದಕ್ಕೆ ಸಹಿ ಹಾಕಲಿವೆ.

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಏ.8ರಂದು ಇಲ್ಲಿಗೆ ಭೇಟಿ ನೀಡಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರ ಕುರಿತು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿ ಮೇಲಿನ ವಿಷಯ ತಿಳಿಸಿದರು.

ಅಂದು ನಡೆದ ಮಾತುಕತೆಯಲ್ಲಿ, ಇಬ್ಬರೂ ನಾಯಕರು ಪರಸ್ಪರ ರಾಷ್ಟ್ರಗಳ ಜನಸಾಮಾನ್ಯರ ಸಂಪರ್ಕ ವೃದ್ಧಿಗೆ ಆದ್ಯತೆ ನೀಡಲು ತೀರ್ಮಾನಿಸಿದ್ದಾರೆ. ಅದಕ್ಕೆ ಪೂರಕವಾಗಿ ಮುಕ್ತ ವೀಸಾ ಒಪ್ಪಂದ ಏರ್ಪಡಲಿದೆ ಎಂದೂ ಕೃಷ್ಣ ಹೇಳಿದರು.

ಗೃಹ ಕಾರ್ಯದರ್ಶಿಗಳ ಮಾತುಕತೆಗೆ ಹೊಸದಾಗಿ ದಿನಾಂಕ ಸೂಚಿಸುವಂತೆ ಪಾಕಿಸ್ತಾನವನ್ನು ಕೋರಲಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನ ಮೇ 22ರಂದು ಮುಗಿಯಲಿದ್ದು, ನಂತರ ದಿನಾಂಕ ನಿಗದಿ ಮಾಡಲು ಕೋರಲಾಗಿದೆ ಎಂದರು.

ಕಠಿಣ ನಿಲುವು: `ನಮ್ಮ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಮುಂದುವರಿಯಬೇಕಾದರೆ ಭಾರತದ ವಿರುದ್ಧ ಪಾಕಿಸ್ತಾನದ ನೆಲದಿಂದ ಪ್ರಚೋದಿಸಲಾಗುತ್ತಿರುವ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಪ್ರಧಾನಿ ಮನಮೋಹನ್ಸಿಂಗ್ ನೆರೆ ರಾಷ್ಟ್ರದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ನೇರವಾಗಿ ಹೇಳಿದ್ದಾರೆ.

ಏಪ್ರಿಲ್ 8ರ ಜರ್ದಾರಿ ಅವರ ಭಾರತ ಭೇಟಿ ಹಾಗೂ ಪ್ರಧಾನಿ ಜತೆ ನಡೆಸಿದ ಮಾತುಕತೆ ಕುರಿತು ಸ್ವಯಂಪ್ರೇರಿತ ಹೇಳಿಕೆ ನೀಡಿದ ಎಸ್. ಎಂ. ಕೃಷ್ಣ, `ನಮ್ಮ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಜನ ಬೆಂಬಲ ದೊರೆಯಬೇಕಾದರೆ ಭಾರತದ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ ಕೊಡುತ್ತಿರುವ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯ. ಈ ವಿಷಯದಲ್ಲಿ ಭಾರತದ ಆತಂಕಗಳನ್ನು ನಿವಾರಣೆ ಮಾಡಬೇಕು~ ಎಂದು ಪಾಕಿಸ್ತಾನಕ್ಕೆ ಹೇಳಲಾಗಿದೆ~ ಎಂದರು.

ಮುಂಬೈ ಮೇಲಿನ ದಾಳಿಗೆ ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭಾರತವನ್ನು ಗುರಿಯಾಗಿಟ್ಟುಕೊಂಡು ಪಾಕ್ ನೆಲದಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಈ ಆರೋಪಗಳಿಗೆ ಪೂರಕವಾಗಿ ಲಷ್ಕರ್-ಇ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಬಹಿರಂಗವಾಗಿ ನಡೆಸಿರುವ ಚಟುವಟಿಕೆಗಳ ಬಗ್ಗೆ ಪ್ರಧಾನಿ, ಜರ್ದಾರಿ ಗಮನ ಸೆಳೆದರು ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದರು.

ಉಭಯ ಮುಖಂಡರ ನಡುವೆ ನಡೆದ ಸುಮಾರು 40ನಿಮಿಷಗಳ ಮಾತುಕತೆ ವೇಳೆ ಹಫೀಜ್ ವಿರುದ್ಧದ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವಿಷಯದಲ್ಲಿ ಎರಡೂ ಸರ್ಕಾರದ ಮಧ್ಯೆ ಚರ್ಚೆ ಮುಂದುವರಿಯುವ ಅಗತ್ಯವಿದೆ ಎಂಬುದಾಗಿ ಜರ್ದಾರಿ ತಿಳಿಸಿದರು ಎಂದು ಕೃಷ್ಣ ವಿವರಿಸಿದರು.

ಕಾಶ್ಮೀರ, ಸಿಯಾಚಿನ್ ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಎಲ್ಲ ವಿವಾದಗಳನ್ನು ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಜರ್ದಾರಿ ಸಭೆಯಲ್ಲಿ ಅಭಿಪ್ರಾಯ ಪಟ್ಟರು. ಈ ಎಲ್ಲ ವಿವಾದಗಳಿಗೆ ಸಂಬಂಧಿಸಿದಂತೆ ಹಂತಹಂತವಾಗಿ ಮುನ್ನಡೆದು ಉಭಯತ್ರರಿಗೆ ಒಪ್ಪಿಗೆಯಾಗುವ ಪರಿಹಾರಗಳನ್ನು ಹುಡುಕಬೇಕಾದ ಅಗತ್ಯವಿದೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆಂದು ಕೃಷ್ಣ ತಿಳಿಸಿದರು.

ಮಾತುಕತೆ ವೇಳೆ ಜರ್ದಾರಿ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಸಿಂಗ್ ಅವರಿಗೆ ಆಹ್ವಾನ ನೀಡಿದರು. ಈ ಆಹ್ವಾನ ಸ್ವೀಕರಿಸಿದ ಪ್ರಧಾನಿ ಸೂಕ್ತ ಸಮಯದಲ್ಲಿ ಭೇಟಿ ಕೊಡುವುದಾಗಿ ಭರವಸೆ ನೀಡಿದರು.
ಪ್ರಧಾನಿ ಭೇಟಿ ದಿನಾಂಕ ಹಾಗೂ ಮಾಡಬೇಕಾದ ಸಿದ್ಧತೆ ಕುರಿತು ರಾಜತಾಂತ್ರಿಕ ಅಧಿಕಾರಿಗಳು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.