ಜೈಪುರ್ (ಐಎಎನ್ಎಸ್): ಭದ್ರತೆಯ ಕಾರಣದಿಂದ ಜೈಪುರ್ ಸಾಹಿತ್ಯ ಉತ್ಸವದಲ್ಲಿ ಭಾಗಿಯಾಗುವುದರಿಂದ ಹಿಂದೆ ಸರಿದಿದ್ದ ವಿವಾದಿತ ~ಸೆಟಾನಿಕ್ ವರ್ಸಸ್~ ಲೇಖಕ ಸಲ್ಮಾನ್ ರಶ್ದಿ ಅವರು ಮಂಗಳವಾರ ವಿಡಿಯೋ ಮೂಲಕ ಸಂವಾದ ನಡೆಸಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಉತ್ಸವದ ಸಂಘಟಕರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಉತ್ಸವದಲ್ಲಿ ವಿಡಿಯೋ ಮೂಲಕ ರಶ್ದಿ ಅವರೊಂದಿಗೆ ಸಂವಾದ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸರಿಯಾದ ಸಮಯ ಇನ್ನೂ ನಿಗದಿ ಮಾಡಿಲ್ಲ ಎಂದು ಟೀಮ್ ವರ್ಕ ಪ್ರೊಡಕ್ಷನ್ ಆಡಳಿತ ನಿರ್ದೇಶಕ ಮತ್ತು ಉತ್ಸವದ ಸಂಘಟಕ ಸಂಜಯ್ ರಾಯ್ ಅವರು ಸೋಮವಾರ ಇಲ್ಲಿ ತಿಳಿಸಿದ್ದಾರೆ.

ತಮ್ಮನ್ನು ಉತ್ಸವದಿಂದ ದೂರ ಇಡುವ ಉದ್ದೇಶದಿಂದಲೇ ರಾಜಸ್ಥಾನದ ಪೊಲೀಸರು ಜೀವ ಬೆದರಿಕೆಯ ಕತೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿರುವ ಸಲ್ಮಾನ್ ರಶ್ದಿ ಉತ್ಸವದಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿದ್ದರು. ಕೊನೆ ಗಳಿಗೆಯಲ್ಲಿ ಭದ್ರತೆಯ ಕಾರಣದಿಂದ ಅವರು ತಮ್ಮ ಭೇಟಿಯನ್ನು ರದ್ದು ಪಡಿಸಿದ್ದರು. ಆದರೆ ಅವರು ಈ ಕುರಿತು ಟ್ವೀಟ್ ಮಾಡುತ್ತ ಈ ಪರಿಸ್ಥಿತಿಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.