ಠಾಣೆ (ಪಿಟಿಐ): ಮನೆಯಲ್ಲಿದ್ದವರೆಲ್ಲ ಹೊರಗೆ ಹೋದ ಸಂದರ್ಭದಲ್ಲಿ ಕಳ್ಳಕಾಕರಿಂದ ಮನೆಗೆ ರಕ್ಷಣೆ ನೀಡುವ ಸಾಧನವೊಂದನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಶಾರ್ದುಲ್ ದಾತರ್, ಹರ್ಷಲ್ ವೆಲಿಂಗ್, ಸನ್ನಿಲ್ ಪಾಟೀಲ್, ವೊಮ್ ವ್ಯಾಸ್, ಅಮೊದ್ ಪಂತ್ ಮತ್ತು ಶೌನಕ್ ಸಾವರ್ಗಾವಂಕರ್ ಅವರನ್ನೊಳಗೊಂಡ ವಿದ್ಯಾರ್ಥಿಗಳ ತಂಡ ತಯಾರಿಸಿರುವ ಈ ಯಂತ್ರದ ಹೆಸರು ‘ರೊಬೊ ನಂದಿ’.

‘ಮನೆಯವರು ಹೊರಗೆ ಹೋದ ಸಂದರ್ಭದಲ್ಲಿ ಮನೆಗೆ ಕನ್ನ ಹಾಕಲು ಕಳ್ಳರು ಬಂದಲ್ಲಿ ಈ ಸಾಧನ ತಕ್ಷಣ ಮನೆಯೊಡೆಯನ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸುತ್ತದೆ’ ಎಂದು ಸಾಧನ ತಯಾರಿಸಿದ ವಿದ್ಯಾರ್ಥಿಗಳ ತಂಡಕ್ಕೆ ಮಾರ್ಗದರ್ಶನ ನೀಡಿದ ಚಿಲ್ಡ್ರನ್ ಟೆಕ್ ಸೆಂಟರ್ನ ಉಪನ್ಯಾಸಕ ಪುರುಷೋತ್ತಮ ಪಂಚಪಾಂಡೆ ಸುದ್ದಿಗಾರರಿಗೆ ತಿಳಿಸಿದರು.

‘ಈ ರೀತಿ ಸಂದೇಶ ಬಂದ ನಂತರ ಆ ಮನೆಯೊಡೆಯ ನೆರವಿಗಾಗಿ ಪಕ್ಕದ ಮನೆಯವರಿಗೆ ವಿಷಯವನ್ನು ತಿಳಿಸಬಹುದಾಗಿದೆ’ ಎಂದು ಹೇಳಿದರು. ‘ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಆರು ವಿದ್ಯಾರ್ಥಿಗಳು ಈ ಸಾಧನ ತಯಾರಿಸಿದ್ದು, ಈ ಸಾಧನ ಶೀಘ್ರದಲ್ಲೆ ಮಾರುಕಟ್ಟೆಗೆ ಬರಲಿದೆ’ ಎಂದು ಉಪನ್ಯಾಸಕ ಪಂಚಪಾಂಡೆ ನುಡಿದರು.

ಮನೆ ಭದ್ರತೆಗಾಗಿ ಬಹುತೇಕ ಗೃಹ ಸಂಘಗಳು ಮತ್ತು ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುತ್ತಾರೆ. ಇದಕ್ಕೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ ಮತ್ತು ಅದರಲ್ಲಿ ಸೆರೆಯಾಗಿರುವ ಚಿತ್ರಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.