ನವದೆಹಲಿ: ಮಹಿಳೆಯರ ರಾಜಕೀಯ ಸಬಲೀಕರಣ ವಿಚಾರದಲ್ಲಿ ಭಾರತದ ಪ್ರಗತಿ ನಿರಾಶಾದಾಯಕ ಎಂದು ವಿಶ್ವಸಂಸ್ಥೆಯ `ಸಹಸ್ರಮಾನದ ಅಭಿವೃದ್ಧಿಯ ಗುರಿಗಳು~ (ಎಂಡಿಜಿ) - 2012ರ ವರದಿ ಹೇಳಿದೆ.

ಅಸಮಾನತೆ ಹೋಗಲಾಡಿಸಲು ಕೋಟಾ ಪದ್ಧತಿ ಆಧಾರದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಸೂಕ್ತ ಪರಿಹಾರ ಕ್ರಮವಾಗಬಹುದು ಎಂದೂ ವರದಿ ಶಿಫಾರಸು ಮಾಡಿದೆ.

ಮಹಿಳೆಯರಿಗೆ ರಾಜಕೀಯದಲ್ಲಿರುವ ಪ್ರಾತಿನಿಧ್ಯವನ್ನು ಸಂಸತ್ನಲ್ಲಿರುವ ಮಹಿಳಾ ಸದಸ್ಯರ ಸಂಖ್ಯೆಯನ್ನು ಆಧರಿಸಿ ವಿಶ್ವಸಂಸ್ಥೆಯ ಎಂಡಿಜಿ ಸಮೀಕ್ಷೆ ನಡೆಸಿದೆ. ಭಾರತದ ಸಂಸತ್ನಲ್ಲಿ ಶೇ 11ರಷ್ಟು ಮಾತ್ರ ಮಹಿಳೆಯರ ಪ್ರಾತಿನಿಧ್ಯ ಇದೆ. ಇದು ಸಹರಾ ಮರುಭೂಮಿಯನ್ನು ಒಳಗೊಂಡಿರುವ ಆಫ್ರಿಕಾ ಉಪಖಂಡದ (ಸಬ್ ಸಹರಾನ್) ರಾಷ್ಟ್ರಗಳಿಗಿಂತಲೂ ಕಡಿಮೆ ಎಂದು ವರದಿ ಬೊಟ್ಟು ಮಾಡಿದೆ.

ಜಾಗತಿಕವಾಗಿಯೂ ಮಹಿಳೆಯರ ರಾಜಕೀಯ ಸಬಲೀಕರಣದ ಪ್ರಮಾಣ ಕಡಿಮೆಯೇ ಇದೆ. ಕಳೆದ ಜನವರಿ ಹೊತ್ತಿಗೆ ವಿಶ್ವದ ವಿವಿಧ ಸಂಸತ್ಗಳಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಶೇ 19.7ರಷ್ಟಿದೆ. ಈ ಹಿಂದಿನ ಅಂಕಿಅಂಶಕ್ಕೆ (ಶೇ 11.3) ಹೋಲಿಸಿದರೆ 2012ರ ಆರಂಭದ ವೇಳೆಗೆ ಸಂಸತ್ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣ ಶೇ 75ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಮುಂದುವರಿದ ದೇಶಗಳಲ್ಲೂ ಮಹಿಳೆಯರ ರಾಜಕೀಯ ಸಬಲೀಕರಣದ ಪ್ರಮಾಣ (ಶೇ 23) ಹೆಚ್ಚೇನೂ ಇಲ್ಲ. ಆದರೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ (ಶೇ 18) ಮುಂದುವರಿದ ದೇಶಗಳ ಅಂಕಿ ಅಂಶ ಆಶಾದಾಯಕವಾಗಿದೆ. ಮುಂದುವರಿದ ದೇಶಗಳಲ್ಲಿ ಲ್ಯಾಟಿನ್ ಅಮೆರಿಕ, ಕೆರೇಬಿಯನ್ ದ್ವೀಪದ ದೇಶಗಳು ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ (ಸರಾಸರಿ ಶೇ 23)ಒತ್ತು ನೀಡಿವೆ. ಸಹರಾ ಮರುಭೂಮಿ ಸುತ್ತಲಿನ ರಾಷ್ಟ್ರಗಳು (ಶೇ 20) ನಂತರದ ಸ್ಥಾನದಲ್ಲಿವೆ.

ಈ ದೇಶಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದು ಇದಕ್ಕೆ ಕಾರಣ. ಆದ್ದರಿಂದ ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ರಾಷ್ಟ್ರಗಳು ಕೋಟಾ ಪದ್ಧತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ವರದಿಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.