ಅಜ್ಮೀರ್(ಐಎಎನ್ಎಸ್): ರಾಜಸ್ತಾನ ಮಾರ್ಗವಾಗಿ ಇಲ್ಲಿಗೆ ಬರುತ್ತಿದ್ದ ಜೋಧಾಪುರ-ರಟ್ಲಮ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ತೀವ್ರ ಆತಂಕಕ್ಕೆ ಕಾರಣವಾದ ಘಟನೆ ಸೋಮವಾರ ಇಲ್ಲಿ ನಡೆದಿದೆ.
ಮಧ್ಯಾಹ್ನದ ವೇಳೆಗೆ ಇಲ್ಲಿಗೆ ಬರಲಿರುವ ಜೋಧಾಪುರ-ರಟ್ಲಮ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ತಿಳಿದ ಪೊಲೀಸರು ಇಲ್ಲಿಂದ 40 ಕಿ.ಮಿ.ದೂರದ ಕಾರ್ವ ನಿಲ್ದಾಣದಲ್ಲಿ ಆ ರೈಲನ್ನು ನಿಲ್ಲಿಸಿದರು. ನಂತರ ಪ್ರಯಾಣಿಕರೆಲ್ಲರನ್ನು ತೆರವುಗೊಳಿಸಿ ರೈಲಿನ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದವರು ಅವರೊಂದಿಗಿದ್ದರು.