ನವದೆಹಲಿ (ಪಿಟಿಐ): ಪಿತೃತ್ವ ವಿವಾದದಲ್ಲಿ ಕಾನೂನು ಸಮರ ನಡೆಸಿದ್ದ ರೋಹಿತ್ ಶೇಖರ್ ಎಂಬ ಯುವಕ ತನ್ನ ಮಗ ಹೌದು ಎಂದು ಆಂಧ್ರಪ್ರದೇಶದ ಮಾಜಿ ರಾಜ್ಯಪಾಲ ಹಾಗೂ ಕಾಂಗ್ರೆಸ್ ಮುಖಂಡ ಎನ್.ಡಿ. ತಿವಾರಿ ಕೊನೆಗೂ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಈ ವಿವಾದಕ್ಕೆ ಸಂಬಂಧಿಸಿ ನಡೆದ ಸುದೀರ್ಘ ಕಾನೂನು ಹೋರಾಟ ಕೊನೆಗೊಂಡಂತಾಗಿದೆ.

‘ಆತನನ್ನು (ರೋಹಿತ್) ಮಗ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಕಳೆದ ವರ್ಷ ನಮ್ಮಿಬ್ಬರ ಡಿಎನ್ಎ ಹೊಂದಿಕೆಯಾದಾಗಲೇ ಇದು ಸಾಬೀತಾಗಿತ್ತು. ಇಂತಹ ಉತ್ತಮ ಕುಟುಂಬದ ಜೊತೆಗೆ ಸಂಬಂಧ ಹೊಂದಿರುವುದಕ್ಕೆ ಹೆಮ್ಮೆ ಇದೆ. ಸಾರ್ವಜನಿಕವಾಗಿ ಈ ವಿಷಯವನ್ನು ಒಪ್ಪಿಕೊಳ್ಳುವ ಮೂಲಕ ವಿವಾದವನ್ನು ಕೊನೆಗೊಳಿಸಲು ಬಯಸುತ್ತೇನೆ’ ಎಂದು ತಿವಾರಿ ಹೇಳಿದ್ದಾರೆ.

‘ರೋಹಿತ್ ಶೇಖರ್ ಜೊತೆಗೆ ‘ಉತ್ತರಾಖಂಡ ಸದನ’ದಲ್ಲಿ ತಿವಾರಿ ಅವರನ್ನು ಭಾನುವಾರ ಭೇಟಿ ಮಾಡಿದ್ದೇನೆ. ಈ ಸಂದರ್ಭದಲ್ಲಿ ರೋಹಿತ್ನನ್ನು ಮಗ ಎಂದು ತಿವಾರಿ ಒಪ್ಪಿಕೊಂಡರು’ ಎಂದು ರೋಹಿತ್ ತಾಯಿ ಡಾ. ಉಜ್ವಲಾ ಶರ್ಮಾ ತಿಳಿಸಿದ್ದಾರೆ.

‘ನನ್ನ ತಾಯಿ ಮತ್ತು ತಿವಾರಿ ನಡುವಣ ಸಂಬಂಧದಲ್ಲಿ ನಾನು ಜನಿಸಿದ್ದೇನೆ. ಅವರು ತನ್ನ ತಂದೆ’ ಎಂದು ರೋಹಿತ್ 2008ರಲ್ಲಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. 2012ರಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಇವರಿಬ್ಬರ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ರೋಹಿತ್ ಅವರು ತಿವಾರಿ ಅವರ ಮಗ ಎಂಬುದು ಸಾಬೀತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.