ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥರು ಶಸ್ತ್ರಾಸ್ತ್ರ ಕೊರತೆಯ ಪ್ರಸ್ತಾಪ ಮಾಡಿರುವ ಬೆನ್ನಲ್ಲೇ, ಸೇನಾ ಸನ್ನದ್ಧತೆ ಕುರಿತು ಸಮಗ್ರ ಅವಲೋಕನ ನಡೆಸಿ ವರದಿಯೊಂದನ್ನು ಹೊರತರಲು ಸಂಸದೀಯ ಸಮಿತಿ ನಿರ್ಧರಿಸಿದೆ.

ರಕ್ಷಣಾ ಇಲಾಖೆಗೆ 2012-13ನೇ ಸಾಲಿಗೆ ಆಗಿರುವ ಬಜೆಟ್ ಮಂಜೂರಾತಿಗಳ ಕುರಿತ ಮೇಲ್ವಿಚಾರಣೆ ನೋಡಿಕೊಳ್ಳುವ ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಈ ಕಾರ್ಯ ಮಾಡಲಿದೆ. ಮೂರು ಸೇನಾ ಪಡೆಗಳ ಹಿರಿಯ ಅಧಿಕಾರಿಗಳು ಹಾಗೂ ಸಚಿವಾಲಯದ ಅಧಿಕಾರಿಗಳು ಸೇನಾ ಸನದ್ಧತೆ ಕುರಿತು ನಿಯಮಿತವಾಗಿ ಸಮಿತಿ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ.

`ಮುಂದಿನ ಆರು ತಿಂಗಳ ಕಾಲ ಅವಲೋಕನ ನಡೆಸಿ ಬರುವ ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿಗೆ ವರದಿ ಸಲ್ಲಿಸುತ್ತೇವೆ. ಈ ವರದಿಯು ಶಿಫಾರಸುಗಳನ್ನು ಕೂಡ ಒಳಗೊಂಡಿರುತ್ತದೆ~ ಎಂದು ಮೂಲಗಳು ತಿಳಿಸಿವೆ.
ವರದಿ ಸಿದ್ಧಪಡಿಸುವಾಗ ಸರ್ಕಾರಿ ಸೇವೆಯಲ್ಲಿರುವ ಹಾಗೂ ಸರ್ಕಾರೇತರ ವಲಯದಲ್ಲಿರುವ ರಕ್ಷಣಾ ತಜ್ಞರ ಸಲಹೆ ಪಡೆಯಲು ಕೂಡ ಸಮಿತಿ ನಿರ್ಧರಿಸಿದೆ.

ಭೂಸೇನೆಗೆ ಸಕಾಲಕ್ಕೆ ಶಸ್ತ್ರಾಸ್ರಗಳ ಪೂರೈಕೆ, ವಾಯುಪಡೆಗೆ ಎಚ್ಎಎಲ್ನಿಂದ ತರಬೇತಿ ವಿಮಾನಗಳ ಪೂರೈಕೆ ಮತ್ತು ನಿರ್ವಹಣೆಯಲ್ಲಿ ಸಮಸ್ಯೆಗಳಿರುವುದು ಸಮಿತಿಯು ಈ ಮುಂಚೆ ನಡೆಸಿದ್ದ ಸಭೆಗಳಲ್ಲಿ ಗಮನಕ್ಕೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.