ನವದೆಹಲಿ: ಭಾರತದ ಖಭೌತ ವಿಜ್ಞಾನಿಗಳು ನಕ್ಷತ್ರಪುಂಜಗಳ (ಗೆಲಾಕ್ಸಿ) ಮಹಾ ಸಮೂಹವೊಂದನ್ನು ಪತ್ತೆ ಮಾಡಿದ್ದಾರೆ. ಇದು ಭೂಮಿಯಿಂದ 400 ಕೋಟಿ ಜ್ಯೋತಿರ್ವರ್ಷಗಳಷ್ಟು (ಒಂದು ವರ್ಷದಲ್ಲಿ ಬೆಳಕಿನ ಕಿರಣ ಸಾಗುವ ದೂರ) ದೂರದಲ್ಲಿದೆ.

ತಾರಾಪುಂಜಗಳ ಈ ಮಹಾಸಮೂಹವನ್ನು ‘ಸರಸ್ವತಿ’ ಎಂದು ಹೆಸರಿಸಲಾಗಿದೆ. ಇದು ವಿಶ್ವದಲ್ಲಿರುವ ಅತ್ಯಂತ ಬೃಹತ್ತಾದ ಸಮೂಹಗಳಲ್ಲಿ ಒಂದು. ಇದು ಮೀನಾ ನಕ್ಷತ್ರಪುಂಜದ ದಿಕ್ಕಿನಲ್ಲಿ ಇದೆ.

ಈ ಮಹಾ ಸಮೂಹದಲ್ಲಿ ಕನಿಷ್ಠ 40 ನಕ್ಷತ್ರಪುಂಜಗಳ ಗುಂಪುಗಳಿವೆ ಮತ್ತು 10 ಸಾವಿರಕ್ಕೂ ಹೆಚ್ಚು ನಕ್ಷತ್ರಪುಂಜಗಳಿವೆ. ಇಷ್ಟೊಂದು ದೊಡ್ಡ ಸಮೂಹ ಈ ವಿಶ್ವದಲ್ಲಿ ಇದೆ ಎಂಬ ಕಲ್ಪನೆಯೇ 10–15 ವರ್ಷಗಳ ಹಿಂದೆ ಇರಲಿಲ್ಲ ಎಂದು ಈ ಶೋಧ ನಡೆಸಿರುವ ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿಯ ತಂಡದ ಮುಖ್ಯಸ್ಥ ಪ್ರೊ. ಸೊಮಕ್ ರಾಯ್‌ಚೌಧರಿ ಹೇಳಿದ್ದಾರೆ.

ವಿಶ್ವ ಹೇಗೆ ಸೃಷ್ಟಿಯಾಯಿತು ಎಂಬ ಬಗೆಗಿನ ಜನಪ್ರಿಯ ಸಿದ್ಧಾಂತಗಳು ‘ಸರಸ್ವತಿ’ಯಂತಹ ಬೃಹತ್ ಸಮೂಹದ ಅಸ್ತಿತ್ವವನ್ನು ಕಲ್ಪಿಸಿಕೊಂಡಿರಲೇ ಇಲ್ಲ. ಹಾಗಾಗಿ ವಿಶ್ವದ ಸೃಷ್ಟಿಯ ಬಗೆಗಿನ ಹೊಸ ಸಿದ್ಧಾಂತಗಳ ಬಗ್ಗೆ ಚಿಂತನೆ ನಡೆಸಲು ಇದು ಅವಕಾಶ ಒದಗಿಸಿಕೊಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.