ನವದೆಹಲಿ: ವಿದೇಶದಿಂದ ದೇಣಿಗೆ ಪಡೆಯಲು ಬೆಂಗಳೂರಿನ ದೊಡ್ಡಗುಬ್ಬಿಯ ಸ್ವಯಂಸೇವಾ ಸಂಸ್ಥೆ ‘ಸೆಲ್ವಿ ರೆಜಿನಾ ಚಾರಿಟಬಲ್ ಟ್ರಸ್ಟ್’ಗೆ ನೀಡಿದ್ದ ಅನುಮತಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.

‘ವಿದೇಶಗಳಿಂದ ಬರುವ ದೇಣಿಗೆ ಮೊತ್ತವನ್ನು ಘೋಷಿತ ಉದ್ದೇಶದ ಬದಲು ಬೇರೆ ಉದ್ದೇಶಗಳಿಗೆ ಬಳಸಲಾಗಿದ್ದು, ಇದು ವಿದೇಶಿ ಕೊಡುಗೆ ಕಾಯ್ದೆ –2010ಗೆ ವಿರುದ್ಧವಾಗಿದೆ’ ಎಂದು ಫೆ.26ರಂದು ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಜೀವನ್ಬಿಮಾ ನಗರದ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಸಂಸ್ಥೆಯ ಖಾತೆಗೆ ಜಮೆ ಆದ ಮೊತ್ತವನ್ನು ತಡೆ ಹಿಡಿಯಲು ಸಹ ಸಚಿವಾಲಯ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.