ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು-ಗಂಡು ಮಕ್ಕಳ ಅನುಪಾತ

Last Updated 31 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆರು ವರ್ಷದೊಳಗಿನ ವಯೋಮಾನದ ಮಕ್ಕಳ ಅನುಪಾತದಲ್ಲಿ ಭಾರಿ ಅಂತರ ಹರಿಯಾಣದಲ್ಲಿದ್ದು, ಇಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ಕೇವಲ 830 ಹೆಣ್ಣು ಮಕ್ಕಳಿದ್ದಾರೆ. ಹಾಗೆಯೇ ಪಂಜಾಬ್‌ನಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 846 ಹೆಣ್ಣು ಮಕ್ಕಳಿದ್ದಾರೆ. ಇಂತಹ ಕಳವಳಕಾರಿ ಅಂಶ ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಎಂದು ಚಂದ್ರಮೌಳಿ ಹೇಳಿದರು.

ಇದೇ ವಯೋಮಾನದ ಮಕ್ಕಳ ಅನುಪಾತದಲ್ಲಿ ಮಿಜೋರಾಂ ಮುಂದಿದ್ದು, ಇಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 971 ಹೆಣ್ಣು ಮಕ್ಕಳಿದ್ದಾರೆ. ನಂತರದ ಸ್ಥಾನ ಮೇಘಾಲಯವಾಗಿದ್ದು, ಇಲ್ಲಿ ಸಾವಿರ ಗಂಡು ಮಕ್ಕಳಿಗೆ 970 ಹೆಣ್ಣು ಮಕ್ಕಳಿದ್ದಾರೆ.

ಹರಿಯಾಣದ ಝಜ್ಜರ್‌ನಲ್ಲಿ ಸಾವಿರ ಗಂಡು ಮಕ್ಕಳಿಗೆ ಕೇವಲ 774 ಹೆಣ್ಣು ಮಕ್ಕಳು ಹಾಗೂ ಮಹೇಂದ್ರಗಡದಲ್ಲಿ ಸಾವಿರ ಗಂಡು ಮಕ್ಕಳಿಗೆ 778 ಹೆಣ್ಣು ಮಕ್ಕಳಿದ್ದಾರೆ.
ಆದರೆ ಹಿಮಾಚಲ ಪ್ರದೇಶದ ಲಾಹುಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಗಂಡು-ಹೆಣ್ಣು ಮಕ್ಕಳ ಅನುಪಾತ ವಿರುದ್ಧವಾಗಿದ್ದು, ಪ್ರತಿ ಸಾವಿರ ಗಂಡು ಮಕ್ಕಳಿಗೆ 1,013 ಹೆಣ್ಣು ಮಕ್ಕಳಿದ್ದಾರೆ.ಒಟ್ಟಾರೆ ರಾಷ್ಟ್ರೀಯ ಹೆಣ್ಣು- ಗಂಡಿನ ಅನುಪಾತದಲ್ಲಿ ಒಂದು ವರ್ಷದಲ್ಲಿ ಏಳು ಅಂಶಗಳು ಏರಿಕೆ ಆಗಿದೆ. ಪ್ರತಿ ಸಾವಿರ ಪುರುಷರಿಗೆ 940 ಮಹಿಳೆಯರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT