ನವದೆಹಲಿ (ಪಿಟಿಐ): ಭವಿಷ್ಯದಲ್ಲಿ ಶಿರಚ್ಛೇದದಂತಹ ಪ್ರಕರಣ ಮರುಕಳಿಸಿದರೆ ಭಾರತವು ಸೂಕ್ತ ಉತ್ತರದ ಬದಲು, ತತ್ ಕ್ಷಣದ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಶುಕ್ರವಾರ ಪಾಕಿಸ್ತಾನಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಸೇನಾ ಮುಖ್ಯ ಅಧಿಕಾರಿಗಳಿಂದ ಗೌರವ ರಕ್ಷೆ ಸ್ವೀಕರಿಸಿದ ಜ. ಸುಹಾಗ್ ಅವರು ‘ಭವಿಷ್ಯದಲ್ಲಿ ಸೂಕ್ತವಾದುದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ನನ್ನ ಕರ್ತವ್ಯ ಎಂದು ಹೇಳಬಲ್ಲೆ. ಅದು ತೀಕ್ಷ್ಣ ಮತ್ತು ತತ್ ಕ್ಷಣದ್ದಾಗಿರುತ್ತದೆ' ಎಂದು ಪತ್ರಕರ್ತರಿಗೆ ತಿಳಿಸಿದರು.

ಕಳೆದ ವರ್ಷ ಜನವರಿ ಎಂಟರಂದು ಪಾಕಿಸ್ತಾನದ ಸೈನಿಕರು, ಭಾರತದ ಪೂಂಛ್ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೈನಿಕ ಲ್ಯಾನ್ಸ್ ನಾಯ್ಕ್ ಹೇಮರಾಜ್ ಅವರ ಶಿರಚ್ಛೇದ ಮಾಡಿದ ಪ್ರಕರಣಕ್ಕೆ ಭಾರತ ಯಾವ ರೀತಿ ಸೂಕ್ತ ಉತ್ತರ ನೀಡಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

26ನೇ ಸೇನಾ ಮುಖ್ಯಸ್ಥರಾಗಿ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.