ಸಾಗರ (ಶಿವಮೊಗ್ಗ ಜಿಲ್ಲೆ): ‘ಸಂಪ್ರ ದಾಯ ಮುರಿಯುವುದು ಎಂದರೆ ಮನುಷ್ಯ ತನ್ನನ್ನು ತಾನೇ ಮಾರ್ಪಾ ಡುಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸೃಷ್ಟಿ ಸುವ ಒಂದು ಕ್ರಿಯೆ’ ಎಂದು ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ‘ಸಂಪ್ರ ದಾಯದೊಂದಿಗೆ ಸಹಬಾಳ್ವೆ’ ಎಂಬ ವಿಷಯ ಆಧರಿಸಿದ ನೀನಾಸಂ ಸಂಸ್ಕೃತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾತಿ, ಸಂಪ್ರದಾಯ ಬಿಡದೆ ನಮ್ಮನ್ನು ನಾವು ಪುನರ್ ಸೃಷ್ಟಿಸಿ ಕೊಳ್ಳಲಾರೆವು’ ಎಂದರು.

‘ಮನುಷ್ಯ ವಿಸ್ತಾರವಾಗಲು ಪ್ರಯತ್ನ ಪಟ್ಟಾಗಲೆಲ್ಲಾ ಸಂಪ್ರದಾಯ ಬಿಟ್ಟಿರುತ್ತಾನೆ. ಸಂಪ್ರದಾಯದ ನೆನಪು ಗಳು ಹಿಂದೆ ಸರಿಯುತ್ತಾ ಹೋದಂತೆ ಅದರ ಗಾಢವಾದ ಶಕ್ತಿ ಕೂಡ ಮರೆ ಯುತ್ತ ಹೋಗುತ್ತದೆ ಎಂಬ ಎಚ್ಚರ ನಮಗೆ ಇರಬೇಕು. ಸಂಪ್ರದಾಯ ಬಿಟ್ಟರೂ ಲೇಖಕನಿಗೆ ಅದರ ನೆನಪುಗಳ ಸಾಂಗತ್ಯ ಬೇಕಾಗುತ್ತದೆ’ ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು.

ಭಾರತೀಯ ಮನಸ್ಸು ಆಧುನಿಕತೆಗೆ ಹಾತೊರೆಯುತ್ತಿದೆ ಎನ್ನುವುದನ್ನು ಗಮನಿಸಿಯೇ ಗಾಂಧೀಜಿ ಆಧುನಿಕ ತೆಯ ಆಸೆ ಹುಟ್ಟಿಸಿದ ನೆಹರು ಅವ ರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರೇನೊ ಎಂದ ಅವರು ‘ಆಧುನಿಕತೆಯನ್ನು ಅಪ್ಪಿಕೊಳ್ಳುವ ಭರದಲ್ಲಿ ಪ್ರಧಾನಿ ಮನಮೋಹನ್ಸಿಂಗ್ ಕೇಂಬ್ರಿಜ್ನಲ್ಲಿ ಮಾಡಿದ ಭಾಷಣದಲ್ಲಿ ನಮ್ಮನ್ನು ನಾಗರಿಕರನ್ನಾಗಿ ಮಾಡಿದ್ದು ನೀವೇ ಎಂದು ಯುರೋಪಿಯನ್ನರಿಗೆ ಹೇಳಿದ್ದು ಐತಿಹಾಸಿಕ ದುರಂತ’ ಎಂದರು.

‘ಆಧುನಿಕ ಶಿಕ್ಷಣದ ಪ್ರಭಾವದಿಂದ ನಮ್ಮ ಮಕ್ಕಳು ನಾವು ಆಡದ ಭಾಷೆ ಯಲ್ಲಿ ಸಂವಹನ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಂಪ್ರದಾಯ ಉಳಿಯಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಆಧುನಿಕರಾಗಿಯೂ ಸಂಪ್ರದಾಯ ವನ್ನು ಬಿಡಲೊಪ್ಪದ ಮನಸ್ಥಿತಿಯೇ ನರೇಂದ್ರ ಮೋದಿ ಅವರಿಗೆ ವ್ಯಕ್ತವಾ ಗುತ್ತಿರುವ ಬೆಂಬಲದ ಹಿಂದೆ ಇದೆ’ಎಂದು ವಿಶ್ಲೇಷಿಸಿದರು.

‘ಸಂಪ್ರದಾಯದ ಜೊತೆ ‘ಅನು ಮಾನ’ದ ಸಂಬಂಧ ಇರಬೇಕು. ಅದನ್ನು ಬಿಟ್ಟರೂ ನಮ್ಮ ಸಾಮಾಜಿಕ ವ್ಯವಸ್ಥೆಯ ಬಹುತ್ವ ಉಳಿಯಬೇಕು. ಸಂಪ್ರದಾಯ ಮತ್ತು ಆಧುನಿಕತೆಯ ನಡುವೆ ಹೇಗೆ ಮುಖಾಮುಖಿ ಯಾಗಬೇಕು ಎನ್ನುವುದೇ ಇಂದಿನ ಲೇಖಕರ ಮುಂದೆ ಇರುವ ದೊಡ್ಡ ಸವಾಲು’ ಎಂದರು.

‘ಸಂಪ್ರದಾಯದ ಮನಸ್ಸಿನಷ್ಟೇ ಆಧುನಿಕತೆಯ ಮನಸ್ಸು ಕೂಡ ಕ್ರೂರ ವಾಗಿದೆ. ಆಧುನಿಕತೆ ಕುರಿತ ಟೀಕೆಯ ಮೂಲಕವೇ ನಮ್ಮ ಹೊಸ ಚಿಂತನಾ ಕ್ರಮ ರೂಪುಗೊಳ್ಳಬೇಕಿದೆ. ಆಧುನಿ ಕತೆಯನ್ನು ‘ಕನ್ನಡ’ದಲ್ಲೆ ಸ್ವೀಕರಿಸು ವುದು ಅದನ್ನು ಎದುರುಗೊಳ್ಳುವ ಉತ್ತಮ ಮಾರ್ಗಗಳಲ್ಲಿ ಒಂದು’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೀನಾಸಂನ ಕೆ.ವಿ.ಅಕ್ಷರ, ‘ಸಂಪ್ರದಾಯ ಎಂದರೆ ಅದು ಭೂತಕಾಲಕ್ಕೆ ಸೇರಿದ ನಿಧಿ ಅಲ್ಲ. ಬದಲಾಗಿ ಸ್ವಾಧೀನ ಪಡಿಸಿಕೊಳ್ಳಬೇಕಾದ ಭವಿಷ್ಯದ ಸಂಪತ್ತು. ಸಹಬಾಳ್ವೆ ಎನ್ನುವುದು ಸ್ವೀಕಾರದ ಜೊತೆಗೆ ವಿರೋಧವ ನ್ನೊಳಗೊಂಡಿದೆ’ ಎಂದರು.

ನಂತರ ಸಂವಾದ ನಡೆಯಿತು. ನವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಡಾ.ಗೋಪಾಲ್ ಗುರು, ವಿಮರ್ಶಕ ಟಿ.ಪಿ.ಅಶೋಕ್, ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಗಿರಡ್ಡಿ ಗೋವಿಂದರಾಜ, ಕೃಷ್ಣಮೂರ್ತಿ ಹನೂರು, ಮನು ಚಕ್ರವರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.