ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 40 ಡಿಗ್ರಿ ತಲುಪಿದ ಉಷ್ಣಾಂಶ

Last Updated 11 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಉಷ್ಣಾಂಶ ಸೋಮವಾರ 40 ಡಿಗ್ರಿ ಸೆಲ್ಸಿಯಸ್‌ನ ಗಡಿ ತಲುಪಿದ್ದು, ಇದು ಪ್ರಸಕ್ತ ಸಾಲಿನ ದಾಖಲೆ ಉಷ್ಣಾಂಶವಾಗಿದೆ.

ಮಲೆನಾಡಿನಲ್ಲಿ ಸುಮಾರು ಹತ್ತು ದಿನಗಳಿಂದ ತಾಪಮಾನ ಏರುಗತಿಯಲ್ಲಿದೆ. ಗರಿಷ್ಠ ಉಷ್ಣಾಂಶ 39.5ಡಿಗ್ರಿ ಸೆಲ್ಸಿಯ ಸ್‌ನ ಆಸುಪಾಸು ದಾಖಲಾಗುತ್ತಿತ್ತು. ಸೋಮವಾರ 40ರ ಗಡಿ ದಾಟಿತು. ಮುಂಬರುವ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಲಕ್ಷಣಗಳಿವೆ ಎಂದು ತಾಪಮಾನ ಪರಿವೀಕ್ಷಣೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಲೆನಾಡು ಅಕ್ಷರಶಃ ಈಚೆಗೆ ಬಯಲುಸೀಮೆ ರೂಪ ಪಡೆಯುತ್ತಿದೆ. ರಾಯಚೂರು, ಗುಲ್ಬರ್ಗ ಮತ್ತಿತರ ಜಿಲ್ಲೆಗಳನ್ನೂ ಮೀರಿಸುವಷ್ಟು ಬಿಸಿಲಿನ ಝಳ ಶಿವಮೊಗ್ಗದಲ್ಲಿ ಕಂಡು ಬರು ತ್ತಿದ್ದು, ಕಳೆದ ವರ್ಷ ಇದೇ ದಿನ 40.5ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT