ಬೆಂಗಳೂರು: ಗೂಡ್ಸ್ ಟ್ರಕ್‌ನಲ್ಲಿ ಬೆಂಗಳೂರಿನಿಂದ ರಾಜಸ್ಥಾನದ ಕಡೆಗೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿ ಸಾಗುತ್ತಿದ್ದ ಸುಮಾರು 101 ಕಾರ್ಮಿಕರನ್ನು ಬೆಳಗಾವಿ ತಾಲೂಕಿನಹೀರೇಬಾಗೇವಾಡಿ ಗ್ರಾಮದ ಬಳಿಯಲ್ಲಿರುವ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕಾರ್ಮಿಕರನ್ನು ಈಗ ಸಾಂಸ್ಥಿಕಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಪುರುಷರು, ಮಹಿಳೆಯರು ಮತ್ತು ಮಕ್ಕಳು ಇರುವ ಕಾರ್ಮಿಕರ ತಂಡವು ಅನುಮತಿ ಇಲ್ಲದೆಯೇ ಗೂಡ್ಸ್ ಟ್ರಕ್‌ನಲ್ಲಿ ರಾಜಸ್ಥಾನದತ್ತ ಹೋಗುತ್ತಿತ್ತು. ಮಂಗಳವಾರ ಬೆಳಗ್ಗೆ ಹೀರೇಬಾಗೇವಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಮತ್ತು ಇತರ ಅಧಿಕಾರಿಗಳು ಇವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನುದೈಹಿಕ ಶಿಕ್ಷಣ ಕಾಲೇಜಿನಕ್ರೀಡಾಂಗಣಕ್ಕೆ ತಂದು ವಿಚಾರಣೆ ನಡೆಸಿ ಆಮೇಲೆ ಬೆಳಗಾವಿ ನಗರದನೆಹರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಸಾಂಸ್ಥಿಕಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಈ ಪೈಕಿ ಒಬ್ಬ ಕಾರ್ಮಿಕನಿಗೆ ಜ್ವರ ಇರುವುದು ವೈದ್ಯಕೀಯ ತಪಾಸಣೆ ಮಾಡಿದಾಗ ತಿಳಿದುಬಂದಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಳಗಾವಿ ನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಹೇಳಿದ್ದಾರೆ.

ಏಪ್ರಿಲ್ ತಿಂಗಳಲ್ಲಿ 300ಕ್ಕಿಂತಲೂ ಹೆಚ್ಚು ಕಾರ್ಮಿಕರು ಎರಡು ಗೂಡ್ಸ್ ಟ್ರಕ್‌ಗಳಲ್ಲಿ ರಾಜಸ್ಥಾನಕ್ಕೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಂಡು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ 101 ಕಾರ್ಮಿಕರು ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವ ಪ್ರಕರಣ ಪತ್ತೆಯಾದ ನಂತರ ನಗರದ ಚೆಕ್ ಪಾಯಿಂಟ್‌ಗಳಲ್ಲಿ ಸರಿಯಾಗಿ ತಪಾಸಣೆ ನಡೆಯುತ್ತಿಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.