ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

108 ಆಂಬುಲೆನ್ಸ್: ಸಿಬ್ಬಂದಿಗೆ ವೇತನ ಭರವಸೆ

Last Updated 7 ಅಕ್ಟೋಬರ್ 2022, 21:05 IST
ಅಕ್ಷರ ಗಾತ್ರ

ಬೆಂಗಳೂರು:ಸರ್ಕಾರದ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಾರದೊಳಗೆ ಎರಡು ತಿಂಗಳ ವೇತನವನ್ನು ಪಾವತಿಸುವುದಾಗಿ ಜಿವಿಕೆ ಸಂಸ್ಥೆ ಭರವಸೆ ನೀಡಿದೆ.

ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.ಜಿವಿಕೆ ಸಂಸ್ಥೆಯಡಿ 2,500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2022–23ನೇ ಸಾಲಿನ ಎರಡನೇ ತ್ರೈಮಾಸಿಕಕ್ಕೆ ಸರ್ಕಾರವು ₹ 25 ಕೋಟಿ ಅನುದಾನವನ್ನು ಸಂಸ್ಥೆಗೆ ಬಿಡುಗಡೆ ಮಾಡಿತ್ತು. ಇದರಲ್ಲಿ 2022ರ ಸೆಪ್ಟೆಂಬರ್ ವರೆಗಿನ ವೇತನವೂ ಸೇರಿತ್ತು. ಈ ಬಗ್ಗೆ ಸಂಸ್ಥೆಯ ಪ್ರತಿನಿಧಿಗಳಿಂದ ಮಾಹಿತಿ ಪಡೆದ ರಂದೀಪ್, ವೇತನ ಪಾವತಿಗೆ ಸೂಚಿಸಿದರು.

ವೇತನ ಪಾವತಿಯ ಬಗ್ಗೆ ಭರವಸೆ ಸಿಕ್ಕಿದ್ದರಿಂದ ಸೇವೆಗೆ ಗೈರಾಗುವ ನಿರ್ಧಾರದಿಂದ ಸಿಬ್ಬಂದಿ ಹಿಂದೆ ಸರಿದಿದ್ದಾರೆ.

‘ವಾರದಲ್ಲಿ ವೇತನ ಪಾವತಿಯಾಗುವ ಬಗ್ಗೆ ಭರವಸೆ ಸಿಕ್ಕಿದೆ. ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆಯೂ ಭರವಸೆ ದೊರೆತಿದೆ.ಈ ಹಿಂದೆ ಮುಷ್ಕರ ನಡೆಸಿದ ಕಾರಣ ವಜಾಗೊಂಡಿದ್ದ ಸಿಬ್ಬಂದಿಯನ್ನು ಮರು ನೇಮಕಾತಿ ಮಾಡಿಕೊಳ್ಳುವುದಾಗಿಯೂ ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ’ ಎಂದು108 ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಎಚ್. ಪರಮಶಿವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT