ತುಮಕೂರು: ತುಮಕೂರು, ಗುಬ್ಬಿ ಮತ್ತು ಕುಣಿಗಲ್ ತಾಲ್ಲೂಕಿನ ಜನರನ್ನು ಬೆಚ್ಚಿ ಬೀಳಿಸಿರುವ ನರಹಂತಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಹೆಬ್ಬೂರು, ಸಿ.ಎಸ್.ಪುರ ಹೋಬಳಿ ಹಾಗೂ ಕುಣಿಗಲ್ ತಾಲ್ಲೂಕಿನ ದೊಡ್ಡಮಳಲವಾಡಿ, ಚಿಕ್ಕಮಳಲವಾಡಿ ಭಾಗದಲ್ಲಿ 20 ಬೋನ್‌ಗಳನ್ನು ಇಟ್ಟಿದೆ. ಚಲನವಲನಗಳನ್ನು ಗಮನಿಸಲು 36 ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ.

ಆದರೂ ಚಿರತೆ ಸೆರೆ ಅರಣ್ಯ ಇಲಾಖೆಗೆ ಸವಾಲಾಗಿದೆ. ಈ ಮೂರು ತಾಲ್ಲೂಕುಗಳು ಕೂಡುವ ಹೆಬ್ಬೂರು ಹೋಬಳಿ ಸುತ್ತಮುತ್ತ ಚಿರತೆ ದಾಳಿಗೆ ಮೂರು ತಿಂಗಳಲ್ಲಿ ಮೂರು ಮಂದಿ ಬಲಿಯಾಗಿದ್ದಾರೆ. ಇಲ್ಲಿನ ಜನರು ದಿನ ಬೆಳಗಾದರೆ ಚಿರತೆ ದಾಳಿಗೆ ಹಸು ಬಲಿ, ಕುರಿ ಬಲಿ ಎನ್ನುವ ಸುದ್ದಿಗಳನ್ನು ಕೇಳುತ್ತಿದ್ದರು.

ಈಗ ಚಿರತೆಗೆ ಮನುಷ್ಯರು ಬಲಿ ಆಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಶುಕ್ರವಾರ ಸಂಜೆ 6.45ರ ಸುಮಾರಿನಲ್ಲಿ ಹೆಬ್ಬೂರು ಹೋಬಳಿಯ ಕಮ್ಮನಹಳ್ಳಿಯಲ್ಲಿ ಚಿರತೆಯ ಚಲನವಲನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಚಿರತೆ ಬಲಿಗಳಿಗೆ ಕಾರಣ ಎನ್ನಲಾಗಿದೆ.

‘ನಾಲ್ಕು ಕಡೆ ಕ್ಯಾಮೆರಾಗಳಲ್ಲಿ ಚಿರತೆ ಚಲನವಲನಗಳು ಸೆರೆ ಆಗಿವೆ. ಯಾವ ಚಿರತೆ ಮನುಷ್ಯರ ಮೇಲೆ ದಾಳಿ ನಡೆಸುತ್ತಿದೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.