ಬೆಂಗಳೂರು: ಆದಾಯಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಬಳ್ಳಾರಿಯ ಉಪವಿಭಾಗಾಧಿಕಾರಿ ಸೇರಿ ರಾಜ್ಯದ ವಿವಿಧ ಕಡೆ 12 ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು.

ಬೆಂಗಳೂರು, ದಾವಣಗೆರೆ, ಗದಗ, ವಿಜಯಪುರ, ಹಾಸನ, ರಾಯಚೂರು, ಶಿವಮೊಗ್ಗ ಜಿಲ್ಲೆಯಲ್ಲಿ ದಾಳಿ ನಡೆದಿದ್ದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್), ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ.

ಈ ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಗಳಿಸಿರುವ ಕುರಿತು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಆದಾಯ ಮೀರಿ ಸಂಪತ್ತು ಗಳಿಸಿರುವ ಕುರಿತು ಪರಿಶೀಲನೆ ಮುಂದುವರಿದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳು
* ಬಿ.ಟಿ. ಕುಮಾರಸ್ವಾಮಿ– ಬಳ್ಳಾರಿ ಉಪವಿಭಾಗಾಧಿಕಾರಿ

* ಎನ್.ಆರ್.ಎಂ. ನಾಗರಾಜನ್– ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್, ಬೆಂಗಳೂರು

* ಬಿ.ಎಸ್. ಪ್ರಹ್ಲಾದ್, ಸೂಪರಿಂಟೆಂಡೆಂಟ್ ಎಂಜಿನಿಯರ್, ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ), ಬೆಂಗಳೂರು

* ಆರ್.ವಿ. ಕಾಂತರಾಜು, ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನಗರ ಯೋಜನೆ ಉಪನಿರ್ದೇಶಕ, ಬೆಂಗಳೂರು

* ಬಿ.ಎಸ್. ಬಾಲನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ಭದ್ರವತಿ, ಶಿವಮೊಗ್ಗ ಜಿಲ್ಲೆ

* ಜೆ.ಸಿ. ಜಗದೀಶಪ್ಪ, ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಹೊನ್ನಾಳಿ, ದಾವಣೆಗರೆ ಜಿಲ್ಲೆ

* ವೆಂಕಟೇಶ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್, ಸಕಲೇಶಪುರ, ಹಾಸನ ಜಿಲ್ಲೆ

* ಅಶೋಕಗೌಡಪ್ಪ ಪಾಟೀಲ, ನರಗುಂದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ, ಗದಗ ಜಿಲ್ಲೆ

* ಸೋಮಪ್ಪ ಟಿ. ಲಮಾಣಿ, ವಿಜಯಪುರ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಶಾಖಾಧೀಕ್ಷಕ

* ರೇಖಾ, ವಾಜರಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ನೆಲಮಂಗಲ ತಾಲ್ಲೂಕು

* ನರಸಿಂಹಲು, ತೆರಿಗೆ ಮೌಲ್ಯಮಾಪಕರು, ಬಿಬಿಎಂಪಿ ಸಿ.ವಿ. ರಾಮನ್‌ನಗರ ಉಪವಿಭಾಗ, ಬೆಂಗಳೂರು

* ಅಮರೇಶ ಬೆಂಚಮರಡಿ, ನಗರಸಭೆ ಸ್ಯಾನಿಟರಿ ಇನ್‌ಸ್ಪೆಕ್ಟರ್, ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.