ರಾಯಚೂರು: ‘ಭಾರತದಲ್ಲಿ ಋಷಿ ಹಾಗೂ ಕೃಷಿ ಎಂಬ ಎರಡು ಸಂಸ್ಕೃತಿಗಳಿದ್ದು, ಇವುಗಳಲ್ಲಿ ಋಷಿ ಸಂಸ್ಕೃತಿ ಉಳಿಯಲು ಕೃಷಿ ಸಂಸ್ಕೃತಿಯ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ’ ಎಂದು ಬಳಗನೂರು ಮರಿಶಿವಯೋಗಿ ಮಠದ ಸಿದ್ದಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷಿಮೇಳದ ಎರಡನೇ ದಿನದ ಸಮಾರಂಭದಲ್ಲಿ ‘ರೈತರಿಂದ ರೈತರಿಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ದೇಶವು ಜ್ಞಾನ, ಸಂಸ್ಕೃತಿ, ಆಚಾರ, ವಿಚಾರಗಳು ಹಾಗೂ ಜಗತ್ತಿಗೆ ಸಾವಯುವ ಕೃಷಿಯನ್ನು ಪರಿಚಯಿಸಿದ ವೈಶಿಷ್ಟ್ಯಪೂರ್ಣ ದೇಶವಾಗಿದೆ’ ಎಂದು ಬಣ್ಣಿಸಿದರು.

‘ದೇಶದ ಪರಂಪರೆಯನ್ನು ಹಾಗೂ ಇತಿಹಾಸವನ್ನು ಗಮನಿಸಿದಾಗ ಎರಡು ಸಂಸ್ಕೃತಿಯನ್ನು ಕಾಣಬಹುದಾಗಿದೆ. ಋಷಿ ಸಂಸ್ಕೃತಿಯಲ್ಲಿನ ಋಷಿಗಳು, ಸಂತರು ಹೇಗೆ ಬದುಕಬೇಕೆಂದು ಕಲಿಸಿದರೇ, ಕೃಷಿ ಸಂಸ್ಕೃತಿಯ ಅನ್ನದಾತರು ಬದುಕಲು ಬೇಕಾದ ಅನ್ನವನ್ನು ಹೇಗೆ ಪಡೆಯಬೇಕು ಎಂಬುವುದನ್ನು ಕಲಿಸುತ್ತಾರೆ’ ಎಂದು ತಿಳಿಸಿದರು.

‘ಎಲ್ಲ ಉದ್ಯೋಗಗಳಿಗೆ ಕೃಷಿ ಮೂಲವಾದದ್ದು, ಕೃಷಿ ಸಂಸ್ಕೃತಿಯಾಗಿದೆ. ಜಗತ್ತಿನಲ್ಲಿ ಭ್ರಷ್ಟಾಚಾರವಿಲ್ಲದ ಉದ್ಯೋಗವೆಂದರೆ ಅದು ಕೃಷಿ ಉದ್ಯೋಗವಾಗಿ ದ್ದು, ಆದರೆ ಇಂದಿನ ದಿನಮಾನಗಳಲ್ಲಿ ಕೃಷಿಯಲ್ಲಿಯೂ ಭ್ರಷ್ಟಾಚಾರವನ್ನು ಕಾಣಬಹುದಾಗಿದ್ದು, ಇದು ವಿಷಾದನೀಯ ಸಂಗತಿಯಾಗಿದೆ’ ಎಂದು ಹೇಳಿದರು.

ಕುಲಪತಿ ಡಾ.ಎಂ.ಹನುಮಂತಪ್ಪ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಸವರಾಜ ವ್ಯಾಗವಾಟ್, ಮಲ್ಲಿಕಾರ್ಜುನ.ಡಿ, ಮಲ್ಲೇಶ ಕೊಲಮಿ, ಮಧುಸೂದನ ರೆಡ್ಡಿ, ತಿಮ್ಮಪ್ಪ ಸೋಮಪ್ಪ ಚಾವಡಿ, ಶ್ರೀನಿವಾಸ ರಾವ್, ನಾರಾಯಣರಾವ್, ಪ್ರಮುಖರಾದ ಗುರುರಾಜ ಸುಂಕದ, ಎ.ಆರ್.ಕುರುಬರ, ಅಮರೇಗೌಡ, ಕೃಷಿ ಇಲಾಖೆಯ ಅಧಿಕಾರಿ ನಯೀಮ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಮ್ಮದ್ ಅಲಿ, ಎಸ್.ಜಿ ಗೌಡಪ್ಪ, ಎ.ಜಿ. ಶ್ರೀನಿವಾಸ, ಹನುಮೇಶ, ಜಾಗೀರದಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.