ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ16 ರಿಂದ ಆಳ್ವಾಸ್‌ ನುಡಿಸಿರಿ

Last Updated 9 ನವೆಂಬರ್ 2018, 13:36 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ 15ನೇ ಆಳ್ವಾಸ್ ನುಡಿಸಿರಿ ನ.16 ರಿಂದ ಮೂರು ದಿನಗಳ ಕಾಲ ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿಜರುಗಲಿದೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿನುಡಿಸಿರಿಯ ಉಪಾಧ್ಯಕ್ಷ ನಾ.ದಾಮೋದರ ಶೆಟ್ಟಿ, ‘ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು’ ಪರಿಕಲ್ಪನೆಯಲ್ಲಿ ಇಡೀ ಸಮ್ಮೇಳನ ಮೂಡಿಬರಲಿದ್ದು, ನ.16 ರಂದು ಬೆಳಿಗ್ಗೆ 9.30ಕ್ಕೆ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರವನ್ನು ಹಿರಿಯ ಸಂಶೋಧಕ ಷ.ಶೆಟ್ಟರ್ ಉದ್ಘಾಟಿಸಲಿದ್ದಾರೆ. ಸಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಮಲ್ಲಿಕಾ ಎಸ್.ಘಂಟಿ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎ.ಉಮಾನಾಥ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.

‘ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು ಹಾಗೂ ಎಂಟು ವಿಶೇಷ ಉಪನ್ಯಾಸಗಳು ನಡೆಯಲಿದ್ದು, ಲೇಖಕ ಲಕ್ಷ್ಮೀಶ ತೋಳ್ಪಾಡಿ, ಪ್ರೊ.ಎಂ.ಕೃಷ್ಣೇಗೌಡ, ವಿದ್ವಾನ್ ಉಮಾಕಾಂತ ಭಟ್ಟ, ಡಾ.ವಿಜಯಕುಮಾರ ಎಸ್.ಕಟಗಿಹಳ್ಳಿಮಠ, ರಂಜಾನ್‌ ದರ್ಗಾ, ಬಸವರಾಜ್‌ ಸಬರದ, ರಘುನಾಥ್‌ ಚ.ಹ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಕವಿಸಮಯ– ಕವಿನಮನ ಕಾರ್ಯಕ್ರಮದಲ್ಲಿ ಎಂಟು ಕವಿಗಳು ಪಾಲ್ಗೊಳ್ಳಲಿದ್ದಾರೆ.ಮೂರು ದಿನಗಳ ಕಾಲ ಆರು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಿಂದ ರಜಾ ಸೌಲಭ್ಯ: ‘ನುಡಿಸಿರಿಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಅನ್ಯಕಾರ್ಯ ನಿಮಿತ್ತ ರಜಾ ಸೌಲಭ್ಯವನ್ನು ಮಂಜೂರು ಮಾಡಲಿದೆ’ ಎಂದರು.

ಆಳ್ವಾಸ್ ಕೃಷಿಸಿರಿ: ‘ನ.15 ರಂದು ಸಂಜೆ 5ಕ್ಕೆ ಕೆ.ಎಸ್.ಪುಟ್ಟಣಯ್ಯ ಕೃಷಿ ಆವರಣದಲ್ಲಿ ‘ಆಳ್ವಾಸ್ ಕೃಷಿ ಸಿರಿ’ ಸಮಾರಂಭವನ್ನು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಉದ್ಘಾಟಿಸಲಿದ್ದಾರೆ. ಪುಷ್ಪ ಪ್ರದರ್ಶನ, 44 ತಳಿಗಳ ಬಿದಿರುಗಳ ಪ್ರದರ್ಶನ, ಮತ್ಸ್ಯ ಮತ್ತು ಸಮುದ್ರ ಚಿಪ್ಪು ಪ್ರದರ್ಶನ ಹಾಗೂ ಕೃಷಿ ಪರಿಕರಗಳ ಮಾರಾಟ, ಪ್ರದರ್ಶನ ಕೂಡ ನಡೆಯಲಿದೆ’ ಎಂದು ಕಾರ್ಯಕ್ರಮದ ಮಾಧ್ಯಮ ಸಂಯೋಜಕಿ ಮೌಲ್ಯ ವಿವರಿಸಿದರು.

‘ಸಾಹಿತಿ ಚಂದ್ರಶೇಖರ ಕಂಬಾರ ಅವರು, ನುಡಿಸಿರಿಯಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಅವರಿಗೆ ಗೌರವ ಸನ್ಮಾನವೂ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹನ್ನೆರಡು ಜನ ಸಾಧಕರಿಗೆ ಆಳ್ವಾಸ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

ಆಳ್ವಾಸ್ ವಿದ್ಯಾರ್ಥಿ ಸಿರಿ: ವಿದ್ಯಾಗಿರಿಯ ಡಾ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ನ.15ರ ಬೆಳಿಗ್ಗೆ 9.30ಕ್ಕೆ ‘ಆಳ್ವಾಸ್ ವಿದ್ಯಾರ್ಥಿ ಸಿರಿ’ ಸಮಾರಂಭ ಆಯೋಜಿಸಲಾಗಿದ್ದು, ಚಿತ್ರ ನಟಿ ವಿನಯಾ ಪ್ರಸಾದ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಎಂ.ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT