ಬೆಂಗಳೂರು: ಇಂಧನ ಸಮಸ್ಯೆ ನಿವಾರಣೆ ಹಾಗೂ ವಾತಾವರಣದಲ್ಲಿ ಕಾರ್ಬನ್ ಅಂಶವನ್ನು ಕಡಿಮೆ ಮಾಡಲು ‘ಇಂಧನ ಸ್ಥಿತಿ ಸ್ಥಾಪಕತ್ವ ಮತ್ತು ಡಿ-ಕಾರ್ಬೊನೈಸೇಶನ್’ ಕೇಂದ್ರಿತವಾಗಿ ಅಂತರರಾಷ್ಟ್ರೀಯ ಜಂಟಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು, ಅಮೃತ ವಿಶ್ವವಿದ್ಯಾಪೀಠಂ ಮತ್ತು ಇಂಗ್ಲೆಂಡ್ನ ಡರ್ಹ್ಯಾಮ್ ವಿಶ್ವವಿದ್ಯಾಲಯಗಳು ಮುಂದಾಗಿವೆ.

ಇಲ್ಲಿನ ಅಮೃತ ವಿಶ್ವವಿದ್ಯಾಪೀಠಂ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಮನೀಷಾ ವಿನೋದಿನಿ ರಮೇಶ್ ಹಾಗೂ ಡರ್ಹ್ಯಾಮ್ ವಿಶ್ವವಿದ್ಯಾಲಯದ ಕುಲಪತಿ ಕ್ಲೇರ್ ಓ ಮ್ಯಾಲಿ ಒಪ್ಪಂದಪತ್ರಕ್ಕೆ ಸಹಿ ಹಾಕಿದರು.

ಈ ವೇಳೆ ಮಾತನಾಡಿದ ಮನೀಷಾ, ‘ಉಭಯ ವಿಶ್ವವಿದ್ಯಾಲಯಗಳು ಜಂಟಿ ಸಂಶೋಧನಾ ಯೋಜನೆ, ನಿರಂತರ ಶಿಕ್ಷಣ ಕಾರ್ಯಕ್ರಮಗಳ ವಿನ್ಯಾಸ ಹಾಗೂ ಅವುಗಳ ಅನುಷ್ಠಾನಕ್ಕೆ ಶ್ರಮಿಸಲಿವೆ. ಡಿಜಿಟಲ್ ಸಂಪನ್ಮೂಲಗಳಿಗೆ ಪರಸ್ಪರ ಹಂಚಿಕೆ, ವೈಜ್ಞಾನಿಕ ಮಾಹಿತಿ ಹಾಗೂ ಪರಿಣಿತಿಯ ವಿನಿಮಯಕ್ಕೆ ಮುಂದಾಗಲಿವೆ’ ಎಂದರು.

ಕ್ಲೇರ್ ಓ ಮ್ಯಾಲಿ ಮಾತನಾಡಿ, ‘ಉಭಯ ವಿವಿಗಳ ಸಹಯೋಗವು ಸಂಶೋಧನೆ ಮತ್ತು ನಾವೀನ್ಯ ಕ್ಷೇತ್ರದಲ್ಲಿ ಹೊಸ ಹೆಜ್ಜೆಗಳನ್ನು ಇರಿಸಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.