ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್‌ ಮುನ್ನಡೆ ಗಳಿಸಿದ ಆಂಧ್ರಪ್ರದೇಶ

ಸಿ.ಕೆ. ನಾಯ್ಡ ಟ್ರೋಫಿ ಕ್ರಿಕೆಟ್‌; ಕಿಶನ್‌ಗೆ 5 ವಿಕೆಟ್
Last Updated 7 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಳಗಾವಿ: ಬ್ಯಾಂಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಆಂಧ್ರಪ್ರದೇಶ ತಂಡ 23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕದ ವಿರುದ್ಧ ಇನಿಂಗ್ಸ್‌ ಮುನ್ನಡೆ ಗಳಿಸಿತು.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೂರನೇ ದಿನದಾಟದಲ್ಲಿ ರಾಜ್ಯ ತಂಡ ಇನಿಂಗ್ಸ್‌ ಮುನ್ನಡೆಗೆ ನಡೆಸಿದ ಹೋರಾಟ ಯಶ ನೀಡಲಿಲ್ಲ. ಪ್ರವಾಸಿ ತಂಡ ಕೊಟ್ಟಿದ್ದ 281 ರನ್‌ಗಳ ಗುರಿಯ ಬೆನ್ನತ್ತಿದ ಕರ್ನಾಟಕ 98.4 ಓವರ್‌ಗಳಲ್ಲಿ 268 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. 13 ರನ್‌ಗಳ ಹಿನ್ನಡೆ ಅನುಭವಿಸಿತು. ಆಂಧ್ರ 2ನೇ ಇನಿಂಗ್ಸ್‌ನಲ್ಲಿ 74 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್‌ ಕಲೆ ಹಾಕಿದೆ.

4ನೇ ದಿನದಾಟದಲ್ಲಿ ಆಂಧ್ರಪ್ರದೇಶವನ್ನು ಆಲೌಟ್ ಮಾಡಿ, ಆ ತಂಡ ನೀಡಿದ ರನ್‌ ಗುರಿ ದಾಟಿದರೆ ಕರ್ನಾಟಕಕ್ಕೆ ಗೆಲ್ಲುವ ಅವಕಾಶವಿದೆ. ಪಂದ್ಯ ಡ್ರಾ ಆದಲ್ಲಿ, ಇನಿಂಗ್ಸ್ ಮುನ್ನಡೆ ಸಾಧಿಸಿರುವ ಆಂಧ್ರ 3 ಪಾಯಿಂಟ್‌ಗಳನ್ನು ಪಡೆದುಕೊಳ್ಳಲಿದೆ.

ಬ್ಯಾಟಿಂಗ್ ಮುಂದುವರಿಸಿದ ಅಬ್ದುಲ್‌ ಹಸನ್ ಖಾಲಿದ್ ಮಂಗಳವಾರ 4 ರನ್‌ಗಳನ್ನಷ್ಟೇ ಗಳಿಸಿದರು. ವೈಶಾಕ್ ವಿಜಯಕುಮಾರ್‌ ಅರ್ಧಶತಕದ (60;106ಎ, 4ಬೌಂ, 2ಸಿ) ಸಾಧನೆ ಮಾಡಿದರು. 3ನೇ ದಿನದಾಟದಲ್ಲಿ ರಾಜ್ಯ ತಂಡ ಗಳಿಸಿದ್ದು 30 ರನ್‌ಗಳಷ್ಟೆ.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಜಗನ್ನಾಥ ರೆಡ್ಡಿ 2ನೇ ಇನಿಂಗ್ಸ್‌ನಲ್ಲೂ (ಬ್ಯಾಂಟಿಂಗ್‌ 43) ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮಾರಕ ಬೌಲಿಂಗ್‌ ಪ್ರದರ್ಶನ ನೀಡಿದ ಕಿಶನ್ ಎಸ್. ಬೇದರೆ 5 ವಿಕೆಟ್‌ಗಳನ್ನು ಕಬಳಿಸಿ ಮಿಂಚುವುದರೊಂದಿಗೆ, ಪ್ರವಾಸಿ ತಂಡದ ರನ್‌ ಗಳಿಕೆಗೆ ‘ಬ್ರೇಕ್‌’ ಹಾಕಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್– ಆಂಧ್ರಪ್ರದೇಶ: 281; ಕರ್ನಾಟಕ 98.4 ಓವರ್‌ಗಳಲ್ಲಿ 268. 2ನೇ ಇನಿಂಗ್ಸ್‌ ಆಂಧ್ರ: 74 ಓವರ್‌ಗಳಲ್ಲಿ 7ಕ್ಕೆ 174 (ಬ್ಯಾಟಿಂಗ್‌ ಗಿರಿನಾಥ್‌ ರೆಡ್ಡಿ 43, ಯಾರಾ ಸಂದೀಪ್ 39, ಸಾಯಿವರ್ಧನ್ 33; ಕಿಶನ್ ಎಸ್.ಬೇದರೆ 47ಕ್ಕೆ 5, ಅಭಿಲಾಷ್‌ ಶೆಟ್ಟಿ 37ಕ್ಕೆ 1, ವೈಶಾಕ್‌ ವಿಜಯಕುಮಾರ್‌ 25ಕ್ಕೆ 1).

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT