ಕೊಪ್ಪಳ:ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸೋಮವಾರ ಹನುಮ ಜಯಂತಿ ಪ್ರಯುಕ್ತ ಮಾಲೆಯ ವಿಸರ್ಜನೆ ಕಾರ್ಯಕ್ರಮ ನಡೆಯಿತು.

ವಿವಿಧ ರಾಜ್ಯಗಳಿಂದ 35 ಸಾವಿರಕ್ಕೂ ಹೆಚ್ಚು ಜನ ವ್ರತಾಧಾರಿಗಳು 542 ಮೆಟ್ಟಿಲುಗಳನ್ನು ಹತ್ತಿ ಆಂಜನೇಯ ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಿ ಮಾಲೆ ವಿಸರ್ಜಿಸಿದರು. ಕೆಲ ವ್ರತಾಧಾರಿಗಳು ಬೆಳಿಗ್ಗೆ5ರಿಂದಲೇ ದರ್ಶನಕ್ಕೆ ಸರತಿಯಲ್ಲಿ ನಿಂತಿದ್ದರು.

ಸಂಕೀರ್ತನಾ ಯಾತ್ರೆ ವೈಭವದಿಂದ ನಡೆಯಿತು. ಶಾಸಕ ಪರಣ್ಣ ಮುನವಳ್ಳಿ ಹನುಮಮಾಲೆ ಹಾಕಿ ಗಮನ ಸೆಳೆದರು. ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷಸೈಯದ್ ನಾಸಿರುದ್ದೀನ್ ಖಾದ್ರಿ ಯಾತ್ರಿಗಳಿಗೆ ಹಣ್ಣು, ಹೂವು ನೀಡಿ ಸ್ವಾಗತಿಸಿದರು.

ಕಳೆದ ಬಾರಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿತ್ತು. ಹೀಗಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.